
ಮೂಡಿಗೆರೆ: ತಾಲೂಕಿನ ಜೋಗಣ್ಣನಕೆರೆ ಬಸ್ ನಿಲ್ದಾಣದ ಸಮೀಪ ಬುಧವಾರ ಅರಣ್ಯ ಇಲಾಖೆ ಅಧಿಕಾರಿಗಳು ಕಳ್ಳಬೇಟೆಗೆ ಬಳಸಿದ ವಸ್ತುಗಳು ಹಾಗೂ ವಾಹನವನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಕಾಡುಪ್ರಾಣಿಯನ್ನು ಕಳ್ಳಬೇಟೆಯಾಡಿ ಪಿಕಪ್ ವಾಹನದಲ್ಲಿ ಸಾಗಿಸುತ್ತಿದ್ದವರನ್ನು ತಪಾಸಣೆ ವೇಳೆ ಹಿಡಿದಿದ್ದಾರೆ; ಅರಣ್ಯಾಧಿಕಾರಿಗಳು ಹಾಲೂರು ಮತ್ತು ಜೋಗಣ್ಣನಕೆರೆ ಬಸ್ ಸ್ಟಾಂಡ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ ನಿಲ್ಲಿಸದೇ ವೇಗವಾಗಿ ತೆರಳಿದ ಪಿಕಪ್ ವಾಹನವನ್ನು ಹಿಂಬಾಲಿಸಿ ತಡೆಗಟ್ಟಿ ಪರಿಶೀಲಿಸಿದಾಗ ಪ್ಲಾಸ್ಟಿಕ್ ಚೀಲದಲ್ಲಿ ಮೃತಪಟ್ಟ 3 ಪುನುಗುಬೆಕ್ಕುಗಳನ್ನು ಸಾಗಿಸುತ್ತಿರುವುದು ಪತ್ತೆಯಾಗಿದೆ; ವಾಹನದಲ್ಲಿದ್ದ ನಾಲ್ವರಲ್ಲಿ ತಾಲೂಕಿನ ಅಬಚೂರು ಗ್ರಾಮದ ಎ.ಜೆ.ನಂದನ್ (38) ಮತ್ತು ಹಾಲೂರು ಗ್ರಾಮದ ಎಚ್.ಜಿ.ಆದರ್ಶ್ (33) ಅವರನ್ನು ಬಂಧಿಸಲಾಗಿದ್ದು, ಹಳೆಮೂಡಿಗೆರೆ ಗ್ರಾಮದ ಪ್ರಿತಮ್ (34) ಹಾಗೂ ಹಾಲೂರು ಗ್ರಾಮದ ಚಿದಾನಂದ (40) ತಲೆಮರೆಸಿಕೊಂಡಿದ್ದಾರೆ; ಈ ಕೃತ್ಯಕ್ಕೆ ಎಚ್.ಜಿ.ಕರುನಾಕರಮೂರ್ತಿ (60) ಮತ್ತು ಚಿಕ್ಕಮಗಳೂರು ತಾಲೂಕಿನ ಮರ್ಲೆ ಗ್ರಾಮದ ಕೃಷ್ಣಪ್ಪ (45) ಸಹಕರಿಸಿರುವುದು ತಿಳಿದುಬಂದಿದ್ದು, ಉಳಿದವರ ಬಂಧನಕ್ಕೆ ಅರಣ್ಯ ಅಧಿಕಾರಿಗಳು ಬಲೆ ಬೀಸಿದ್ದಾರೆ; ಪ್ರಕರಣದಲ್ಲಿ 3 ಪುನುಗುಬೆಕ್ಕುಗಳ ಮೃತದೇಹ, 2 ಒಂಟಿ ನಳಿಕೆ ಬಂದೂಕು, 4 ತೋಟ, 1 ಟಾರ್ಚ್, ಆರೋಪಿಗಳ 2 ಮೊಬೈಲ್ಗಳು ಹಾಗೂ ಕಳ್ಳಸಾಗಾಣಿಕೆಗೆ ಬಳಸಿದ ಮಹೀಂದ್ರ ಬೊಲೆರೋ ಮ್ಯಾಕ್ಸ್ ಟ್ರಕ್ ವಾಹನವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ; ಡಿಸಿಎಫ್ ರಮೇಶ್ ಬಾಬು ಹಾಗೂ ಎಸಿಎಫ್ ಟಿ.ಎಂ. ಆಕರ್ಷ್ ಅವರ ಮಾರ್ಗದರ್ಶನದಲ್ಲಿ ಆರ್ಎಫ್ಒ ಮಂಜುನಾಥ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಗೋಣಿಬೀಡು ಉಪ ವಲಯ ಅರಣ್ಯಾಧಿಕಾರಿ ರವಿರಾಜ್, ಗಸ್ತು ಅರಣ್ಯ ಪಾಲಕರಾದ ಪರಮೇಶ್, ಎ.ವಿ.ಶಿವರಾಜ್, ವಿ.ಎಸ್.ಆದರ್ಶ್, ವಾಚರ್ ಬಿ.ಕೆ.ಉದಯ್ ಹಾಗೂ ವಾಹನ ಚಾಲಕ ನವರಾಜ್ ಭಾಗವಹಿಸಿದ್ದರು.




