
ಮೂಡಿಗೆರೆ: ತಾಲೂಕಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ವಿಭಿನ್ನವಾಗಿ ಆಚರಿಸುವ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿರುವ ಚಾಲವಾಡಿ ಮಹಾಸಭಾ ಒಂದೇ ವೇದಿಕೆಯಲ್ಲಿ ಸಂಯುಕ್ತವಾಗಿ ಆಚರಿಸಬೇಕೆಂದು ಒತ್ತಾಯಿಸಿದ್ದು, ಮಾಹಿತಿಯ ಪ್ರಕಾರ ಮೂಡಿಗೆರೆ ಪಟ್ಟಣದಲ್ಲಿ ಎರಡು ವಿಭಿನ್ನ ಸಮಿತಿಗಳು ಪ್ರತ್ಯೇಕ ದಿನಾಂಕಗಳಲ್ಲಿ ಜಯಂತಿ ಆಚರಿಸಲು ಮುಂದಾಗಿದ್ದು ಒಂದು ಸಮಿತಿ ಏಪ್ರಿಲ್ 24 ರಂದು ಹಾಗೂ ಮತ್ತೊಂದು ಸಮಿತಿ ಏಪ್ರಿಲ್ 27 ರಂದು ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಿದೆ, ಈ ರೀತಿಯ ವಿಭಜಿತ ಆಚರಣೆಗಳಿಂದ ಸಮಾಜದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಿ ಸಮುದಾಯದ ಏಕತೆಗೆ ಧಕ್ಕೆಯುಂಟಾಗುವ ಸಾಧ್ಯತೆ ಇದೆ ಎಂದು ಮಹಾಸಭಾ ಆತಂಕ ವ್ಯಕ್ತಪಡಿಸಿದ್ದು, ಎಲ್ಲಾ ಸಂಘಟನೆಗಳು ಹಾಗೂ ಸಮುದಾಯದ ಮುಖಂಡರು ಒಂದಾಗಿ ಸೇರಿ ಒಂದೇ ದಿನ ಒಂದೇ ವೇದಿಕೆಯಲ್ಲಿ ಅಂಬೇಡ್ಕರ್ ಜಯಂತಿ ಆಚರಿಸುವ ಮೂಲಕ ಐಕ್ಯತೆ ಮತ್ತು ಸೌಹಾರ್ದತೆಯನ್ನು ಕಾಪಾಡಬೇಕೆಂದು ಮನವಿ ಮಾಡಲಾಗಿದೆ, ಈ ಕುರಿತು ಚಾಲವಾಡಿ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಬೆಟ್ಟಿಗೆರೆ ಮಂಜುನಾಥ್ ಪತ್ರಿಕಾ ಪ್ರಕಟಣೆ ನೀಡಿ ಸಮಾಜದ ಹಿತದೃಷ್ಟಿಯಿಂದ ಒಗ್ಗಟ್ಟಿನ ಆಚರಣೆಗೆ ಸಹಕಾರ ನೀಡುವಂತೆ ಕರೆ ನೀಡಿದ್ದಾರೆ.




