
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಬಾಳೆಹೊನ್ನೂರು ಸಮೀಪದ ಎಲೆ ಕಲ್ಲು ಘಾಟಿ ಭಾಗದಲ್ಲಿ ಚಿಕ್ಕಮಗಳೂರು-ಬಾಳೆಹೊನ್ನೂರು ರಾಜ್ಯ ಹೆದ್ದಾರಿಯಲ್ಲಿ ಉದ್ದ ದಂತಗಳಿರುವ ಒಂಟಿ ಸಲಗ ಪ್ರತ್ಯಕ್ಷವಾಗಿದ್ದು, ಸುಮಾರು ಎರಡೂವರೆ ರಿಂದ ಮೂರು ಅಡಿ ಉದ್ದದ ದಂತ ಹೊಂದಿರುವ ಈ ಕಾಡಾನೆ ಕಾಣಿಸಿಕೊಂಡ ಹಿನ್ನೆಲೆ ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ; ದಿನದ 24 ಗಂಟೆಯೂ ವಾಹನ ಸಂಚಾರ ಇರುವ ಈ ಮಾರ್ಗದಲ್ಲಿ ಶೃಂಗೇರಿ, ಕಳಸ ಮತ್ತು ಹೊರನಾಡು ಕಡೆಗೆ ಹಗಲಿರುಳು ಭಕ್ತರು ಸಂಚರಿಸುತ್ತಿರುವುದರಿಂದ ಕೆಲವೊಮ್ಮೆ ರಸ್ತೆ ಮಧ್ಯೆ ನಿಲ್ಲುವ ಸಲಗದಿಂದ ತಿರುವುಗಳಲ್ಲಿ ವೇಗವಾಗಿ ಬರುವ ವಾಹನಗಳು ಡಿಕ್ಕಿ ಹೊಡೆಯುವ ಸಾಧ್ಯತೆ ಹೆಚ್ಚಾಗಿದೆ ಎಂದು ಆತಂಕ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಕಾಡಾನೆಯನ್ನು ಸುರಕ್ಷಿತವಾಗಿ ಸ್ಥಳಾಂತರಿಸುವಂತೆ ಸ್ಥಳೀಯರು ಹಾಗೂ ಪ್ರಯಾಣಿಕರು ಆಗ್ರಹಿಸಿದ್ದಾರೆ.




