
ಚಿಕ್ಕಮಗಳೂರು ನಗರದಲ್ಲಿ ಸರ್ಕಾರಿ ಅಥವಾ ಪ್ರತಿಷ್ಠಿತ ಕಾಲೇಜುಗಳಲ್ಲಿ ಗೌರವಯುತವಾಗಿ ಕೆಲಸ ಮಾಡಲು ಆಸಕ್ತಿ ಇರುವ ಉದ್ಯೋಗಾಕಾಂಕ್ಷಿಗಳಿಗೆ ಒಂದು ಸುವರ್ಣ ಅವಕಾಶ, ಚಿಕ್ಕಮಗಳೂರಿನ ಲಾಲ್ ಬಹದ್ದೂರ್ ಶಾಸ್ತ್ರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಖಾಲಿ ಇರುವ ಅತಿಥಿ ಶಿಕ್ಷಕ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ನೀವು ಕೂಡ ಕಂಪ್ಯೂಟರ್ ಅಥವಾ ತಂತ್ರಜ್ಞಾನ ಸಂಬಂಧಿತ ಪದವಿ ಪಡೆದಿದ್ದರೆ ಅಪ್ಲೈ ಮಾಡಬಹುದಾಗಿದೆ. ಈ ಪ್ರಕಟಣೆಯ ಪ್ರಕಾರ, ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಕೃತಕ ಬುದ್ಧಿಮತ್ತೆ ವಿಷಯಕ್ಕೆ ಸಂಬಂಧಿಸಿದ ಅತಿಥಿ ಶಿಕ್ಷಕರ ಒಂದು ಹುದ್ದೆಯನ್ನು ಭರ್ತಿ ಮಾಡಿಕೊಳ್ಳಲಾಗಿದ್ದು, ಜುಲೈ 25 ಅರ್ಜಿ ಆಹ್ವಾನದ ಕೊನೆಯ ದಿನಾಂಕವಾಗಿದೆ.




