
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಯಗಟಿ ಸಮೀಪದ ಪಾತೇನಗಳ್ಳಿ ಗ್ರಾಮದಲ್ಲಿ ಶಿವಮ್ಮ [32] ಎಂಬ ಮಹಿಳೆಯ ಮೇಲೆ ಹಲ್ಲೆ ನಡೆದಿದ್ದು, ಈ ಮಹಿಳೆ ಪಾತೇನಹಳ್ಳಿ ಗ್ರಾಮದ ಪಾಳುಬಿದ್ದ ಜಮೀನಿನಲ್ಲಿ ಕುರಿ ಮೇಯಿಸುತ್ತಿದ್ದು, ನವೀನ್ ಎಂಬುವವರ ತೋಟದ ಮಾರ್ಗವಾಗಿ ಬೇರೆ ಜಾಗಕ್ಕೆ ಹೋಗುವಾಗ ಕೈಯಲ್ಲಿದ್ದ ತೆಂಗಿನಕಾಯಿ ಕಂಡು ತನ್ನದ್ದೇ ತೋಟದ್ದೆಂದು ಭಾವಿಸಿ ತಾನು ಕರೆದಾಗ ಬರುವುದಿಲ್ಲ, ತೆಂಗಿನಕಾಯಿ ತೆಗೆದುಕೊಂಡು ಹೋಗ್ತೀಯ ಎಂದು ಮಹಿಳೆಯ ಬಟ್ಟೆ ಹರಿದು, ನೆಲಕ್ಕೆ ಹಾಕಿ ತುಳಿದಿರುವ ಆರೋಪದಲ್ಲಿ ನವೀನ್, ಕಲ್ಲೇಶ್, ಹಾಗೂ ದೀಪು ಎಂಬುವವರ ವಿರುದ್ಧ ಕಡೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗಾಯಾಳು ಶಿವಮ್ಮ ಅವರನ್ನು ಕಡೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ವರದಿ: ಸಂತೋಷ್ ಅತ್ತಿಗೆರೆ




