
ಚಾಮರಾಜನಗರ : ಆದಿ ಜಗದ್ಗುರು ಶ್ರೀ ಶಂಕರಾಚಾರ್ಯ ಜಯಂತಿ ಅಂಗವಾಗಿ ಶಂಕರಪುರದ ಶ್ರೀರಾಮ ಮಂದಿರದಲ್ಲಿ ಪ್ರಾತಃಕಾಲ ಶ್ರೀ ಶಂಕರಾಚಾರ್ಯ ಅಷ್ಟೋತ್ತರ ಪಾರಾಯಣ, ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿಸಲಾಯಿತು ಮತ್ತು ಆದಿ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು, ಈ ಸಂದರ್ಭದಲ್ಲಿ ಶ್ರೀರಾಮ ಮಂದಿರದ ಅಧ್ಯಕ್ಷರಾದ ಪ್ರತಾಪ್, ಕಾರ್ಯದರ್ಶಿ ಸತೀಶ್, ಸಂಸ್ಕೃತಿ ಚಿಂತಕ ಸುರೇಶ್ ಎನ್ ಋಗ್ವೇದಿ, ಪುರೋಹಿತ ರಾಘವನ್, ವತ್ಸಲಾ ರಾಜಗೋಪಾಲ್, ವಿಜಯಕುಮಾರ್, ಶೈಲಾನಾಗೇಂದ್ರ ಹಾಗೂ ವಾಣಿಶ್ರೀ ಉಪಸ್ಥಿತರಿದ್ದರು.




