Bengaluru: Chief Minister of Karnataka Siddaramaiah with DCM DK Shivakumar and other party MLAs, MPs, MLCs during an all party meeting on Cauvery and Mahadayi water disputes at Vidhana Soudha, in Bengaluru on Wednesday August 23, 2023. (Photo: IANS)
ಬೆಂಗಳೂರು: ರಾಜ್ಯ ರಾಜಕಾರಣದ ಪಡಸಾಲೆಯಲ್ಲಿ ಒಂದಿಷ್ಟು ಬಿರುಸಿನ ಚಟುವಟಿಕೆಯನ್ನು ಗಮನಿಸುತ್ತಿದ್ದೇವೆ. ಮುಖ್ಯಮಂತ್ರಿ ಬದಲಾವಣೆ, ಸಂಪುಟ ಪುನಾರಚನೆ ಮುಂತಾದ ವಿಷಯಗಳ ಚರ್ಚೆ ನವೆಂಬರ್ ಹೊತ್ತಿಗೆ ಸಿದ್ದರಾಮಯ್ಯ ಮುಂದಿನ ಎರಡುವರೆ ವರ್ಷಕ್ಕೆ ನಾನೇ ಸಿಎಂ ಎಂಬಂತೆ ಬಿಂಬಿಸಿಕೊಂಡಿದ್ದರು. ಇತ್ತೀಚೆಗೆ ದೆಹಲಿಗೆ ತೆರಳಿದ ಡಿ.ಸಿ.ಎಂ ’ಕೈ’ ಗೆ ನಾಯಕರು ಸಿಗದೆ ಬರಿಗೈಯಲ್ಲಿ ವಾಪಾಸಾಗಿದ್ದರು. ಆದರೆ ಇದೀಗ ಕೆಲ ಮೂಲಗಳಿಂದ ನವೆಂಬರ್ ಕೊನೆ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಪಟ್ಟಕೇರಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಈ ಸುದ್ದಿ ಒಕ್ಕಲಿಗರಲ್ಲಿ ಹೊಸ ಹುಮ್ಮಸ್ಸನ್ನು ಮೂಡಿಸಿದೆ. ಮುಂದಿನ ಕಾರ್ಯ-ತಂತ್ರ-ಪ್ರತಿತಂತ್ರಗಳನ್ನು ಕಾದುನೋಡಬೇಕಿದೆ.
