ಚಿಕ್ಕಮಗಳೂರು: ಚಿಕ್ಕಮಗಳೂರಿನ ತರೀಕೆರೆ ತಾಲ್ಲೂಕಿನ ಮುಂಡ್ರೆ ಸಮೀಪದ ನವಿಲೇಕಲ್ ಗುಡ್ಡ ಗ್ರಾಮದಲ್ಲಿ ನಡೆದ ದಾರುಣ ಘಟನೆಯಲ್ಲಿ 5 ವಷದ ಸಾನ್ವಿ ಎಂಬ ಮಗು ಚಿರತೆ ದಾಳಿಗೆ ಬಲಿಯಾಗಿದೆ. ಮನೆಯ ಹಿಂದೆ ಇರುವ ಕೊಟ್ಟಿಗೆಯಲ್ಲಿ ಇದ್ದಾಗ ಚಿರತೆ ದಾಳಿ ಮಾಡಿ ಮಗುವನ್ನು ಕಾಡಿನತ್ತ ಎಳೆದುಕೊಂಡು ಹೋಗಿದ್ದು, ಕೂಗು ಕೇಳಿ ಓಡಿ ಬಂದ ಮನೆಯವರು ಹಾಗೂ ಸ್ಥಳೀಯರು ತಕ್ಷಣ ಹುಡುಕಾಟ ಆರಂಭಿಸಿದ್ದು, ಕೆಲವು ಸಮಯದ ಹುಡುಕಾಟದ ನಂತರ ಕಾಡಂಚಿನಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದ್ದು, ಈ ಘಟನೆ ಸ್ಥಳೀಯರಲ್ಲಿ ಭೀತಿ ಹಾಗೂ ದುಃಖವನ್ನು ಉಂಟುಮಾಡಿದೆ. ಪ್ರಕರಣದ ಕುರಿತು ಬೀರೂರು ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ತನಿಖೆ ಮುಂದುವರೆದಿದೆ.
