
ಚಿಕ್ಕಮಗಳೂರು: ನಗರ ಹೊರವಲಯದ ಗಾಲ್ಫ್ ರಸ್ತೆ ಬಳಿ ಪ್ರವಾಸಿಗರ ಹುಚ್ಚಾಟ ಮುಂದುವರಿದಿದ್ದು, ಮಧ್ಯರಾತ್ರಿ ನಡು ರಸ್ತೆಯಲ್ಲೇ ಟಿಟಿ ವಾಹನ ನಿಲ್ಲಿಸಿಕೊಂಡು ಪ್ರವಾಸಿಗರು ಮೋಜು-ಮಸ್ತಿ ಮಾಡಿದ್ದಾರೆ. ಸುಮಾರು 20ರಿಂದ 30ಕ್ಕೂ ಹೆಚ್ಚು ಮಂದಿ ಜನವಸತಿ ಪ್ರದೇಶದಲ್ಲೇ ಜೋರಾಗಿ ಕೂಗಾಟ ನಡೆಸಿ, ಮೈಕ್ ಹಾಗೂ ಸ್ಪೀಕರ್ ಹಾಕಿಕೊಂಡು ರಸ್ತೆ ಬದಿ ಡ್ಯಾನ್ಸ್ ಮಾಡಿದ್ದಾರೆ. ಮದ್ಯದ ಅಮಲಿನಲ್ಲಿ ಪ್ರವಾಸಿಗರು ನಡೆಸಿದ ಈ ಹುಚ್ಚಾಟದಿಂದ ಸ್ಥಳೀಯರಿಗೆ ತೀವ್ರ ಕಿರಿಕಿರಿ ಉಂಟಾಗಿದ್ದು, ಘಟನೆಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಚಿಕ್ಕಮಗಳೂರು ನಗರದ ಹೊರವಲಯದ ಗಾಲ್ಫ್ ರಸ್ತೆ ಬಳಿ ನಡೆದ ಘಟನೆ ಬಸವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ್ದು, ಮಧ್ಯರಾತ್ರಿ ಪ್ರವಾಸಿಗರ ವರ್ತನೆಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವರದಿ: ಸಂತೋಷ್ ಅತ್ತಿಗೆರೆ




