
ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ 80s ಫೋಟೋ ಟ್ರೆಂಡ್ ಇದೀಗ ಸೈಬರ್ ತಜ್ಞರ ಆತಂಕಕ್ಕೆ ಕಾರಣವಾಗಿದೆ. AI ಬಳಸಿ ತಮ್ಮ ಫೋಟೋಗಳನ್ನು 1980ರ ದಶಕದ ಲುಕ್ಗೆ ಕನ್ವರ್ಟ್ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ವೇಳೆ ಒರಿಜಿನಲ್ ಫೋಟೋ ಹಾಗೂ ವೈಯಕ್ತಿಕ ಮಾಹಿತಿಯ ಸುರಕ್ಷತೆ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೈಬರ್ ಎಕ್ಸ್ಪರ್ಟ್ ಡಾ. ಶುಭಮಂಗಳ ಸೂಚಿಸಿದ್ದಾರೆ. ಟ್ರೆಂಡ್ನ ಹೆಸರಿನಲ್ಲಿ ಅಪರಿಚಿತ ಆ್ಯಪ್ಗಳು ಅಥವಾ ಪ್ಲಾಟ್ಫಾರ್ಮ್ಗಳಿಗೆ ಫೋಟೋ ಅಪ್ಲೋಡ್ ಮಾಡುವುದರಿಂದ Face Data Exposure ಆಗುವ ಸಾಧ್ಯತೆ ಇದ್ದು, ಫೋಟೋಗಳನ್ನು ದುರುಪಯೋಗಪಡಿಸಿಕೊಳ್ಳುವ ಅಪಾಯವೂ ಇದೆ ಎನ್ನಲಾಗಿದೆ. ಜೊತೆಗೆ ಡೀಪ್ಫೇಕ್ ಸೇರಿದಂತೆ ವಿವಿಧ ಸೈಬರ್ ಅಪರಾಧಗಳಿಗೆ ಫೋಟೋ ಬಳಕೆಯಾಗುವ ಸಾಧ್ಯತೆ ಇರುವುದರಿಂದ, ವಿಶೇಷವಾಗಿ ಯುವತಿಯರು ತಮ್ಮ ಫೋಟೋಗಳನ್ನು ಅಪರಿಚಿತ AI ಆ್ಯಪ್ಗಳಿಗೆ ನೀಡುವ ಮುನ್ನ ಎಚ್ಚರಿಕೆ ವಹಿಸಬೇಕು ಎಂದು ತಜ್ಞರು ಹೇಳಿದ್ದಾರೆ. ಕಳೆದ ಕೆಲ ದಿನಗಳಿಂದ ವೇಗವಾಗಿ ವೈರಲ್ ಆಗುತ್ತಿರುವ 80s ಫೋಟೋ ಟ್ರೆಂಡ್ಗೆ ಮಾರುಹೋಗುವ ಮುನ್ನ ವೈಯಕ್ತಿಕ ಡೇಟಾದ ಸುರಕ್ಷತೆ ಬಗ್ಗೆ ಗಮನಹರಿಸಿ, ಅಗತ್ಯವಿಲ್ಲದ ಕಡೆ ಒರಿಜಿನಲ್ ಫೋಟೋಗಳನ್ನು ಹಂಚಿಕೊಳ್ಳದಂತೆ ಸೈಬರ್ ತಜ್ಞರು ಎಚ್ಚರಿಕೆ ನೀಡಿದ್ದಾರೆ.




