
ವಿಜಯನಗರ, ಕೂಡ್ಲಿಗಿ : ಸಾಮಾಜಿಕ ಎಲ್ಲಾ ಸಮಸ್ಯೆಗಳಿಗೆ ಶಿಕ್ಷಣವೇ ಪರಿಹಾರವಾಗಿದೆ , ಕಾರಣ ಸರ್ವರೂ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡಬೇಕಿದೆ ಎಂದು ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್ ಕ್ಷೇತ್ರದ ಜನತೆಗೆ ಕರೆ ನೀಡಿದರು. ದೇವಸ್ಥಾಗಳಿಗೆ ಒಲವು ತೋರುವ ಬದಲು , ಸರ್ಕಾರಿ ಶಾಲೆಗಳ ಕ್ಷೇಮಕ್ಕಾಗಿ ಒಲವು ತೋರಬೇಕಿದೆ ಎಂದು ಸಲಹೆ ನೀಡಿದರು. ಕ್ಷೇತ್ರದ ಬಹುತೇಕ ಕಡೆಗಳಲ್ಲಿ , ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಹಗಲಿರುಳು ಶ್ರಮಿಸಲಾಗುತ್ತಿದೆ. ಬದಲಾಗಿ ಸರ್ಕಾರಿ ಶಾಲೆಗಳ ಕ್ಷೇಮಾಭಿವೃದ್ಧಿಗೆ, ಹಾಗೂ ಗುಣ ಮಟ್ಟದ ಶಿಕ್ಷಣ ಒದಗಿಸಿ ಶೈಕ್ಷಣಿಕವಾಗಿ ಸುಧಾರಿಸುವ ನಿಟ್ಟಿನಲ್ಲಿ ಸರ್ವರೂ ಶ್ರಮಿಸಬೇಕಿದೆ ಎಂದರು. ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ , “2026-27 ನೇ ಸಾಲಿಗೆ ನೂತನವಾಗಿ ಪ್ರಾರಂಭವಾಗಲಿರುವ. 30 ಇ.ಸಿ.ಸಿ.ಇ ಮತ್ತು 7 ಕೆ.ಪಿ.ಎಸ್ ಶಾಲೆಗಳು , ಹಾಗೂ 3 ಶಾಲೆಗಳನ್ನು. ಪ್ರೌಢ ಶಾಲೆಗಳಾಗಿ ಉನ್ನತೀಕರಿಸಿರುವ ಕುರಿತು ಮಾಹಿತಿ ನೀಡಲು , ಹಾಗೂ ಸಾಧಕ ಬಾದಕಗಳನ್ನು ಚರ್ಚಿಸುವುದಕ್ಕಾಗಿ. ಶಾಲೆಗಳ ಎಸ್.ಡಿ.ಎಂ. ಸಿ. ಅಧ್ಯಕ್ಷರು , ಹಾಗೂ ಶಾಲೆಗಳ ಮುಖ್ಯ ಶಿಕ್ಷಕರಿಗಾಗಿ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿದರು. ತಾವು ಶಾಸಕರಾದಾಗಿನಿಂದ ಈವರೆಗೆ , ಕ್ಷೇತ್ರದ ಬಹುತೇಕ ಗ್ರಾಮಗಳಿಗೆ ಭೆಟಿನೀಡಿದ್ದು. ಹಲವು ಗ್ರಾಮಗಳಲ್ಲಿ ಯುವಕರು ಕುಡಿತ ಸೇರಿದಂತೆ , ಅನೇಕ ವ್ಯಸನಗಳಿಗೆ ಜೂಜು ಮೋಜು ಮಸ್ತಿಗಳಿಗೆ ತುತ್ತಾಗಿರುವುದನ್ನು ಕಂಡಿದ್ದು. ಕೆಲ ಯುವಕರು ವ್ಯಸನಗಳಿಂದಲೇ , ತಮ್ಮ ಜೀವ ಹಾಗೂ ಜೀವನಗಳನ್ನು ಕಳೆದುಕೊಂಡಿರುವುದು ಕಾಣಬಹುದಾಗಿದೆ ಎಂದು ತೀವ್ರ ವಿಷಾದ ವ್ಯೆಕ್ತಪಡಿ ಸಿದರು. ಹಳ್ಳಿಗಳಲ್ಲಿ ಪ್ರೌಢ ಶಾಲೆಗಳು ಇಲ್ಲದೇ ಕಾರಣ, ಅಕ್ಷರ ಜ್ಞಾನದ ಕೊರತೆ ಉಂಟಾಗಿದೆ. ಇದರಿಂದಾಗಿ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದು , ಬಾಲ್ಯ ವಿವಾಹ ಹಾಗೂ ಚಿಕ್ಕ ವಯಸ್ಸಿಗೇ ಗರ್ಭಿಣಿಯರಾಗಿ. ವಯೋಮಾನಕ್ಕೂ ಮುನ್ನವೇ ಗರ್ಭಧರಿಸಿ , ಅನಾರೋಗ್ಯಕ್ಕಿಡಾಗಿ ಹೆರಿಗೆ ವೇಳೆ ಸಾಕಷ್ಟು ಜನರು ಪೋಕ್ಸೋ ಕೇಸ್ ಪ್ರಕರಣಕ್ಕೆ ತುತ್ತಾಗಿದ್ದಾರೆ. ಮಾತ್ರವಲ್ಲ ಸಮಾಜಿಕ ಸಮಸ್ಯೆಗಳಿಗೆಲ್ಲಾ ಶಿಕ್ಷಣವೇ ಮದ್ದು ಎಂದು ಶಾಸಕರು ಮುನರುಶ್ಚರಿಸಿದರು.
ಅಂದಿನಿಂದಲೂ ಸರ್ಕಾರದ ಮಟ್ಟದಲ್ಲಿ 7 ಕೆ.ಪಿ. ಎಸ್. ಶಾಲೆಗಳು , ಹಾಗೂ 3 ಪ್ರೌಢ ಶಾಲೆಗಳನ್ನು ತರಲಾಗಿದೆ. ಕ್ಷೇತ್ರದ ಪ್ರತಿ ಹೆಣ್ಣು ಮಗು ಶಾಲೆಗೆ ತೆರಳಬೇಕಿದೆ , ಅವರನ್ನು ವಿದ್ಯಾವಂತರನ್ನಾಗಿ ಮಾಡಿದಾಗ ಮಾತ್ರ ಬಾಲ್ಯ ವಿವಾಹ ವಿಧವಾ ಪದ್ಧತಿ, ಪೋಕ್ಸೋ ಕೇಸ್ ಪ್ರಕರಣಗಳು ಕಡಿಮೆಯಾಗಲು ಸಾಧ್ಯ ಎಂದರು.
ಆ ನಿಟ್ಟಿನಲ್ಲಿ, ಶಾಲೆಗಳ ಪ್ರಾರಂಭ, ಮಕ್ಕಳ ಶಿಕ್ಷಣಕ್ಕೆ ಪ್ರವೇಶ, ತಾತ್ಕಾಲಿಕ ಕೊಠಡಿಗಳ ಸಿದ್ಧತೆ, ಶಿಕ್ಷಕರ ನಿಯೋಜನೆ, ಹೊಸದಾಗಿ ಕೊಠಡಿಗಳ ನಿರ್ಮಾಣ, ಶಾಲೆಗಳ ನಿರ್ಮಾಣಕ್ಕಾಗಿ ಭೂಮಿ ಗೊತ್ತು ಪಡಿಸಿರುವುದು, ಹೀಗೆ ಪ್ರತಿಯೊಂದಕ್ಕೆ ಸಂಬಂಧಿಸಿದಂತೆ , ಅನುದಾನವನ್ನು ಮೀಸಲು ಇಟ್ಟಿದ್ದೇವೆ ಎಂದರು. ಶಾಸಕರು ಮಾತನಾಡಿ, ನಾನು ದೇವಸ್ಥಾನಗಳಿಗೆ ಕೊಡುವ ಹಣವನ್ನು, ಶಾಲೆಗಳಿಗೆ ಕೊಟ್ಟಿದ್ದರೇ, ಎಷ್ಟೋ ನಮ್ಮ ಕ್ಷೇತ್ರ ಸುಧಾರಣೆಯಾಗುತಿತ್ತು ಎಂದೂ ಸಭೆಯಲ್ಲಿ ಇರುವವರನ್ನು ಎಚ್ಚರಿಸಿದರು. ಹಾಗೆಯೇ, ಸೂಚ್ಯವಾಗಿ, ಒಂದು ಮಾತನ್ನು ಹೇಳಿದರು. ಕೆ.ಪಿ.ಎಸ್ ಶಾಲೆಗಳು ಮತ್ತು ಪ್ರೌಢ ಶಾಲೆಗಳು ಆರಂಭದಲ್ಲಿ ನಮ್ಮ ಕ್ಷೇತ್ರದಲ್ಲಿ ಪ್ರಾರಂಭವಾಗುವುದರಿಂದ ಅದರ ಆರಂಭಿಕ ಸಂದರ್ಭದಲ್ಲಿ , ಸಮಸ್ಯೆ -ಸವಾಲುಗಳನ್ನು ಎದುರಿಸಬೇಕಾಗಬಹುದಾಗಿದೆ. ಶಿಕ್ಷಕರು ಪೋಷಕರು ಎಸ್ಡಿಎಮ್ಸಿಯವರು , ಯಾವುದೇ ಕಾರಣಕ್ಕೆ ದೃತಿಗೆಡಬಾರದೆಂದು ಶಿಕ್ಷಕರು ಮತ್ತು ಎಸ್.ಡಿ.ಎಂ. ಸಿ. ಅಧ್ಯಕ್ಷರಿಗೆ ಕಿವಿ ಮಾತು ಹೇಳಿದರು. ಮತ್ತು ಮುಖ್ಯ ಶಿಕ್ಷಕರ ಹಾಗೂ ಎಸ್ಡಿ ಎಮ್ಸಿ ಅಧ್ಯಕ್ಷರ , ಅಹವಾಲುಗಳನ್ನು ಆಲಿಸಿದರು.
ಸಭೆಯಲ್ಲಿ ಬಿಇಒ ಮೈಲೇಶ್ ಬೆವೂರು, ಕ್ಷೇತ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು, ಎಸ್. ಡಿ. ಎಂ. ಸಿ ಅಧ್ಯಕ್ಷರುಗಳು ಉಪಸ್ಥಿತರಿದ್ದರು.
ವರದಿ: ವಿ.ಜಿ.ವೃಷಭೇಂದ್ರ ಕೂಡ್ಲಿಗಿ




