
ಕಾರ್ಕಳ: ನೆಕ್ಲಾಜೆ ಕಾಳಿಕಾಂಬಾ ದೇವಸ್ಥಾನದ ಪ್ರತಿ ವರ್ಷ ನಡೆಯುವ ಜಾತ್ರಾ ಮಹೋತ್ಸವ ಪ್ರಯುಕ್ತ ವ್ಯಾಘ್ರ ಚಾಮುಂಡಿ ದೈವದ ಭಂಡಾರ ನೆಕ್ಲಾಜೆ ಗುತ್ತು ರಾಘವೇಂದ್ರ ಉಪಾಧ್ಯಾಯ ಅವರ ಮನೆಯಿಂದ ಭಂಡಾರ ಹೊರಟು ಕಾಳಿಕಾಂಬಾ ದೇವಸ್ಥಾನದ ಮುಂಭಾಗದಲ್ಲಿ ದೈವಗಳ ಸಿರಿ ಸಿಂಗಾರದ ನೇಮೋತ್ಸವ ನಡೆಯಿತು. ಈ ಕುರಿತು ಶಿವ ಪ್ರಸಾದ್ ಭಟ್ ರಾಘವೇಂದ್ರ ಉಪಾಧ್ಯಾಯ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಶಿಲ್ಪಿ ರಾಮಚಂದ್ರ ಆಚಾರ್ಯ ಹಾಗೂ ಇನ್ನಿತರ ಆಡಳಿತ ಮೊಕ್ತೇಸರರು ಮತ್ತು ಅರ್ಚಕರು ಸಮಿತಿಯ ಸದಸ್ಯರು ಭಕ್ತಾದಿಗಳು ದೈವಗಳ ಸಿರಿ ಸಿಂಗಾರದ ನೇಮೋತ್ಸವ ದಲ್ಲಿ ಭಾಗವಹಿಸಿ ದೈವಗಳ ಸಿರಿ ಮುಡಿ ಗಂಧ ಪ್ರಸಾದ ಸ್ವೀಕರಿಸಿದರು.
ವರದಿ: ಅರುಣ್ ಭಟ್ ಕಾರ್ಕಳ.




