
ಚಿಕ್ಕಮಗಳೂರು: ರಾಜ್ಯ ಸರ್ಕಾರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆಯ ವತಿಯಿಂದ ಶಂಕರ ಭಾರತಿ ಗೋಶಾಲೆಯ ಗೋವುಗಳ ಆಶ್ರಯಕ್ಕಾಗಿ 10 ಲಕ್ಷ ವೆಚ್ಚದಲ್ಲಿ ನೂತನ ಗೋಶೆಡ್ ನಿರ್ಮಿಸಲಾಗಿದ್ದು, ಈ ಗೋಶೆಡ್ ನಿರ್ಮಾಣದಿಂದ ಗೋಶಾಲೆಯಲ್ಲಿರುವ ಗೋವುಗಳಿಗೆ ಸುರಕ್ಷಿತ ಹಾಗೂ ಸುಸಜ್ಜಿತ ಆಶ್ರಯ ದೊರೆತಿದ್ದು, ಗೋಸಂರಕ್ಷಣಾ ಕಾರ್ಯಕ್ಕೆ ಮತ್ತಷ್ಟು ಬಲ ದೊರೆತಿದೆ ಎಂದು ಗೋಶಾಲೆಯ ಸದಸ್ಯರು ತಿಳಿಸಿದ್ದಾರೆ. ಈ ಮಹತ್ವದ ಯೋಜನೆಗೆ KSMCL ಸಂಸ್ಥೆಯ ಅಧ್ಯಕ್ಷರಾದ ಶ್ರೀ ಜಿ. ಎಸ್. ಪಾಟೀಲ್, ಶಾಸಕರು, ರೋಣ ಕ್ಷೇತ್ರ, ಸಹಕಾರ ನೀಡಿದ್ದು, ದಿವಂಗತ ಐಎಎಸ್ ಅಧಿಕಾರಿಗಳಾಗಿದ್ದ ಶ್ರೀಯುತ ಮಹಾಂತೇಶ ಬೀಳಗಿ, ಹಾಗೂ ಕಾರ್ಯನಿರ್ವಹಣಾ ಕಾರ್ಯದರ್ಶಿಗಳಾದ ಶ್ರೀ ವಿಶ್ವನಾಥ್ ಹಿರೇಮಠ ಅವರಿಗೆ ಶಂಕರ ಭಾರತಿ ಗೋಶಾಲೆಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದ್ದ್ದು, ಸಮಾಜಮುಖಿ ಸೇವೆ ಮತ್ತು ಗೋಸಂರಕ್ಷಣೆಗೆ ನೀಡಿರುವ ಈ ಸಹಕಾರ ಇತರ ಸಂಸ್ಥೆಗಳಿಗೂ ಮಾದರಿಯಾಗಲಿ ಎಂದು ಗೋಶಾಲೆಯವರು ಆಶಯ ವ್ಯಕ್ತಪಡಿಸಿದ್ದಾರೆ.




