
ಚಿಕ್ಕಮಗಳೂರು: ಕೂಲಿಗೆ ಬಂದು ಕರ್ನಾಟಕದಲ್ಲಿ ಬಾಲ ಬಿಚ್ತಿರೋ ಅಸ್ಸಾಂಮಿಗರು ಎಂಬ ಆರೋಪದ ನಡುವೆ, ಅವರು ಅಸ್ಸಾಂಮಿಗರಲ್ಲ ಅಕ್ರಮ ಬಾಂಗ್ಲಾದೇಶಿ ನಿವಾಸಿಗಳು ಎಂಬ ಅನುಮಾನವೂ ವ್ಯಕ್ತವಾಗಿದ್ದು, ಮಲೆನಾಡಿನಲ್ಲಿ ಮತ್ತೆ ಲವ್ ಜಿಹಾದ್ ವಿಚಾರ ಮುನ್ನೆಲೆಗೆ ಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಪ್ರದೇಶದಲ್ಲಿ ಕಾಫಿ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ಯುವಕ ಹಾಗೂ ಮಧ್ಯಪ್ರದೇಶ ಮೂಲದ ಅಪ್ರಾಪ್ತ ಬಾಲಕಿಗೆ ಸಂಬಂಧಿಸಿದಂತೆ ಅಪಹರಣ ಮತ್ತು ಮತಾಂತರ ಆರೋಪ ಕೇಳಿಬಂದಿದ್ದು, ಬಾಲಕಿಯ ದೂರಿನ ಮೇರೆಗೆ ಹಬೀವರ್ ಇಸ್ಲಾಂ ವಿರುದ್ಧ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಕುರಿತು ಶ್ರೀರಾಮಸೇನಾ ನೇತೃತ್ವದಲ್ಲಿ ದೂರು ಸಲ್ಲಿಸಲಾಗಿ, ಪ್ರಮೋದ್ ಮುತಾಲಿಕ್, ಸುಂದರೇಶ್ ಹಾಗೂ ಸ್ಥಳೀಯ ಹಿಂದೂ ಸಂಘಟನೆಗಳ ಮುಖಂಡರು ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ. ಆರೋಪಿಯ ಹಿನ್ನೆಲೆ, ವಲಸೆ ಕಾರ್ಮಿಕರ ದಾಖಲೆಗಳು ಹಾಗೂ ಮತಾಂತರ ಆರೋಪಗಳ ಕುರಿತು ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿರುವ ಸಂಘಟನೆಗಳು, ಮಲೆನಾಡು ಭಾಗದಲ್ಲಿ ಇಂತಹ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಸರ್ಕಾರ ಮತ್ತು ಪೊಲೀಸ್ ಇಲಾಖೆ ವಲಸೆ ಕಾರ್ಮಿಕರ ಚಟುವಟಿಕೆಗಳ ಮೇಲೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಮನವಿ ಮಾಡಿವೆ. ಪ್ರಕರಣದಲ್ಲಿ ನ್ಯಾಯ ಸಿಗದಿದ್ದರೆ ಹೋರಾಟ ನಡೆಸುವುದಾಗಿ ಸಂಘಟನೆಗಳು ಎಚ್ಚರಿಕೆ ನೀಡಿವೆ.




