
ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಜೀವರಾಜ್ ಇಂದು ಪ್ರಮಾಣವಚನ ಸ್ವೀಕರಿಸಲಿದ್ದು, ಮಧ್ಯಾಹ್ನ 3.30ಕ್ಕೆ ವಿಧಾನಸೌಧದಲ್ಲಿ ಪ್ರಮಾಣವಚನ ಬೋಧಿಸಲು ಸಭಾಧ್ಯಕ್ಷ ಯುಟಿ ಖಾದರ್ ಸಮಯ ನಿಗದಿಪಡಿಸಿದ್ದಾರೆ ಈ ನಡುವೆ ಪ್ರಮಾಣವಚನ ವಿಳಂಬವಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದ್ದು, ಪಕ್ಷದ ಪ್ರತಿನಿಧಿಗಳು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಸ್ಪೀಕರ್ ಲಭ್ಯವಿಲ್ಲದಿದ್ದರೆ ಜೀವರಾಜ್ ಅವರಿಗೆ ಪ್ರಮಾಣವಚನ ಬೋಧಿಸುವಂತೆ ಮನವಿ ಮಾಡಿದ್ದರು, ಇದೀಗ ಸ್ಪೀಕರ್ ಖಾದರ್ ಕಾರ್ಯಕ್ರಮಕ್ಕೆ ಸಮಯ ನಿಗದಿಪಡಿಸಿದ್ದಾರೆ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜೇಗೌಡ 201 ಮತಗಳ ಅಂತರದಿಂದ ಗೆದ್ದಿದ್ದರೆ, ಸೋತಿದ್ದ ಜೀವರಾಜ್ ಅಂಚೆ ಮತ ಮರುಎಣಿಕೆಗಾಗಿ ನ್ಯಾಯಾಲಯ ಮೊರೆಹೋಗಿದ್ದು, ಕಳೆದ ವಾರಾಂತ್ಯ ಹೈಕೋರ್ಟ್ ಆದೇಶದಂತೆ ನಡೆದ ಮರುಎಣಿಕೆಯಲ್ಲಿ ರಾಜೇಗೌಡ ಪಡೆದಿದ್ದ 569 ಅಂಚೆ ಮತಗಳಲ್ಲಿ 318 ಮತಗಳು ಅಸಿಂಧು ಎಂದು ಘೋಷಿಸಲ್ಪಟ್ಟ ಪರಿಣಾಮ ಫಲಿತಾಂಶದಲ್ಲಿ ದೊಡ್ಡ ಬದಲಾವಣೆ ಸಂಭವಿಸಿ ಜೀವರಾಜ್ 52 ಮತಗಳ ಅಂತರದಿಂದ ಜಯಗಳಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ಜೀವರಾಜ್, 2023 ಮೇ 13ರಂದು ಕೌಂಟಿಂಗ್ ದಿನವೇ ಅಸಿಂಧು ಮತಗಳನ್ನು ರಾಜೇಗೌಡರಿಗೆ ಸೇರಿಸಲಾಗಿದೆ ಎಂದು ತಮ್ಮ ಚುನಾವಣಾ ಏಜೆಂಟ್ ಮೂಲಕ ಆರ್ಒಗೆ ದೂರು ನೀಡಿದ್ದರೂ ಅದನ್ನು ಲೆಕ್ಕಿಸದೇ ಪ್ರಮಾಣಪತ್ರ ನೀಡಲಾಗಿತ್ತು, ನಂತರ ಅಂಚೆ ಮೂಲಕ ಉತ್ತರ ಬಂದಿದ್ದು, ತಾನು ಅಂದೇ ಗೆದ್ದಿದ್ದರೂ ಮೋಸದಿಂದ ಫಲಿತಾಂಶ ಬದಲಾಯಿಸಲಾಗಿದೆ ಎಂದು ಆರೋಪಿಸಿ, ಇದೀಗ ನ್ಯಾಯ ಸಿಕ್ಕಿರುವುದರಿಂದ ಸಂತೋಷವಾಗಿದೆ ಎಂದರು. ಇದೇ ವೇಳೆ ಅಂಚೆ ಮತ ತಿರುಚಿದ ಆರೋಪ ಸಂಬಂಧ ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿರುವುದಾಗಿ ತಿಳಿದುಬಂದಿದ್ದು, ನ್ಯಾಯಾಲಯ ಸ್ಪಷ್ಟ ಆದೇಶ ನೀಡಿದ್ದರೂ ಆರ್ಒ ಅದನ್ನು ಪಾಲಿಸದಿದ್ದ ವಿಚಾರವನ್ನೂ ಉಲ್ಲೇಖಿಸಿದ ಅವರು, ಇದೀಗ ಅಧಿಕಾರಿಗಳ ಮೇಲೆ ಆರೋಪ ಮಾಡಲು ಇಷ್ಟವಿಲ್ಲ, ಸರ್ಕಾರದ ಒತ್ತಡದ ನಡುವೆ ಅಧಿಕಾರಿಗಳು ಏನು ಮಾಡಲು ಸಾಧ್ಯ ಎಂದು ಹೇಳಿದ್ದಾರೆ, ಹಾಗೂ ಈಗ ಪ್ರಮಾಣಪತ್ರವನ್ನು ಸ್ವೀಕರಿಸಿರುವುದಾಗಿ ತಿಳಿಸಿದ್ದಾರೆ.







