ಶೃಂಗೇರಿ : ಈ ಹಿಂದೆ ತರೀಕೆರೆ ತಾಲ್ಲೂಕು ಉಪ್ಪಾರ ಬಸವನಹಳ್ಳಿ ಶಾಲೆಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಅಮಾನತುಗೊಂಡಿರುವ ಶಿಕ್ಷಕ ಸಿದ್ದರಾಮಪ್ಪರನ್ನು ಶೃಂಗೇರಿ ತಾಲ್ಲೂಕಿನ ಮರ್ಕಲ್ ಪಂಚಾಯತಿ ವ್ಯಾಪ್ತಿಯ ಗಂಡಘಟ್ಟ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಮರುನೇಮಕ ಮಾಡಿದ್ದು ಇದಕ್ಕೆ ಗ್ರಾಮ ಪಂಚಾಯತಿ ಸದಸ್ಯ ಪ್ರಶಾಂತ್ ಕೆ ವಿರೋಧ ವ್ಯಕ್ತಪಡಿಸಿ, ಇಂತಹ ಆರೋಪ ಹೊಂದಿರುವ ವ್ಯಕ್ತಿ ನಮ್ಮ ಶಾಲೆಗೆ ಬರಕೂಡದು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಆದೇಶ ಕೂಡಲೇ ಹಿಂಪಡೆಯಬೇಕು ಇಲ್ಲವಾದರೆ ವಿದ್ಯಾರ್ಥಿಗಳು ಪೋಷಕರ ಜೊತೆ ಕಛೇರಿ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಜಿಲ್ಲೆಯ ಇತರ ಭಾಗಗಳಲ್ಲಿ ಅಮಾನತುಗೊಂಡಿರುವ ಅಧಿಕಾರಿಗಳು ಶೃಂಗೇರಿ ತಾಲ್ಲೂಕಿಗೆ ವಕ್ಕರಿಸುತ್ತಿದ್ದು, ಈ ಬಗ್ಗೆ ಶಾಸಕರು ಎಚ್ಚರ ವಹಿಸಬೇಕಿದೆ.
