
ಕಡೂರು: ಸಿಂಗಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಮತ್ತಿಹಳ್ಳಿ ಬೋವಿ ಕಾಲೋನಿ ಸರ್ಕಲ್ ಬಳಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಆರೋಪದ ಮೇಲೆ ದೇವರಹಳ್ಳಿ ಗ್ರಾಮದ ಲಕ್ಷ್ಮೀಶ್ ಡಿಬಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಿಎಸ್ಐ ಮಂಜುನಾಥ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಅನುಮಾನಾಸ್ಪದವಾಗಿ ಪ್ಲಾಸ್ಟಿಕ್ ಚೀಲ ಹಿಡಿದು ನಿಂತಿದ್ದ ಲಕ್ಷ್ಮೀಶ್ನನ್ನು ಪರಿಶೀಲಿಸಿದಾಗ ಚೀಲದಲ್ಲಿ ಮದ್ಯದ ಪ್ಯಾಕೆಟ್ಗಳು ಪತ್ತೆಯಾಗಿವೆ. ಪಂಚರ ಸಮಕ್ಷಮದಲ್ಲಿ ತಪಾಸಣೆ ನಡೆಸಿದ ಮದ್ಯದ ಒಟ್ಟು ಪ್ರಮಾಣ 4.23 ಲೀಟರ್ ಆಗಿದೆ. ವಶಪಡಿಸಿಕೊಂಡ ಮದ್ಯದ ಅಂದಾಜು ಮೌಲ್ಯ ₹2,585 ಎಂದು ತಿಳಿದುಬಂದಿದೆ. ಮದ್ಯದ ಪ್ಯಾಕೆಟ್ಗಳು ಹಾಗೂ ಪ್ಲಾಸ್ಟಿಕ್ ಚೀಲವನ್ನು ಪಂಚರ ಸಮಕ್ಷಮದಲ್ಲಿ ಅಮಾನತ್ತುಪಡಿಸಿಕೊಂಡು, ಅಕ್ರಮ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಸಿಂಗಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.




