
ಚಿಕ್ಕಮಗಳೂರು : ಚಿತ್ರದುರ್ಗದ ಒನಕೆ ಓಬವ್ವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 7 ಜಿಲ್ಲೆಗಳನ್ನೊಳಗೊಂಡ ಐ.ಸಿ.ಎಸ್.ಇ ಶಾಲೆಗಳ ವಲಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಬಣಕಲ್ ನಜರತ್ ಶಾಲೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. 19 ವರ್ಷದೊಳಗಿನ ಡಬಲ್ಸ್ ವಿಭಾಗದಲ್ಲಿ ಪ್ರೀಡನ್ ಡಿಸೋಜಾ ಹಾಗೂ ಕ್ರಿಸ್ಟನ್ ಸ್ಟೀವ್ ಲಸ್ರದೋ ದ್ವಿತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಇದೇ ವೇಳೆ, 17 ವರ್ಷದೊಳಗಿನ ಡಬಲ್ಸ್ ವಿಭಾಗದಲ್ಲಿ ಮೊಹಮ್ಮದ್ ಆದಿಲ್ ಹಾಗೂ ಮೊಹಮ್ಮದ್ ಅಂಫಾಲ್ ತೃತೀಯ ಸ್ಥಾನ ಗಳಿಸಿದ್ದಾರೆ. ಅಲ್ಲದೆ, 19 ವರ್ಷದೊಳಗಿನ ಸಿಂಗಲ್ಸ್ ವಿಭಾಗದಲ್ಲಿ ಅವಿನ್ ಡಿಸೋಜಾ ತೃತೀಯ ಸ್ಥಾನ ಪಡೆದು ಶಾಲೆಯ ಗೌರವವನ್ನು ಹೆಚ್ಚಿಸಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಶಿಕ್ಷಕ-ಸಿಬ್ಬಂದಿ ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.




