
ಮೂಡಿಗೆರೆ: ದಸರಾ ಪ್ರಯುಕ್ತ ಮೂಡಿಗೆರೆಯಲ್ಲಿ ನಡೆದ ಮೂಡಿಗೆರೆ ಸೀಸನ್-02 ಜಿಲ್ಲಾ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಜಯಪುರದ ಅಲ್ಟಿಮೇಟ್ ಫಿಟ್ನೆಸ್ ಸಂಸ್ಥೆಯ ಸ್ಪರ್ಧಿಗಳು ಉತ್ತಮ ಸಾಧನೆ ಮಾಡುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಸಂಸ್ಥೆಯ ರಾಜೇಶ್ ಅವರು 65 ವಿಭಾಗದಲ್ಲಿ ಸ್ಪರ್ಧಿಸಿ ದ್ವಿತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ. ಇನ್ನು ಸಂಸ್ಥೆಯ ವಿನೀತ್ ಹಾಗೂ ಶಿವಕಾಶಿ ಅವರು ಕೂಡ ಸ್ಪರ್ಧೆಯಲ್ಲಿ ಭಾಗವಹಿಸಿ ಪದಕ ಮತ್ತು ಪ್ರಮಾಣಪತ್ರಗಳನ್ನು ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ಸ್ಪರ್ಧೆಯಲ್ಲಿ ಸಾಧನೆ ಮಾಡಿದ ಎಲ್ಲರಿಗೂ ಜಯಪುರದ ಅಲ್ಟಿಮೇಟ್ ಫಿಟ್ನೆಸ್ ಸಂಸ್ಥೆಯ ತರಬೇತುದಾರ ವಿನಯ್ ಅವರು ಶುಭಾಶಯಗಳನ್ನು ತಿಳಿಸಿ ಅಭಿನಂದಿಸಿದ್ದಾರೆ. ಈ ಸಂದರ್ಭದಲ್ಲಿ ಸಂಸ್ಥೆಯ ತರಬೇತುದಾರ ವಿನಯ್ ಸೇರಿದಂತೆ ಸಂಸ್ಥೆಯ ಯುವಕರು ಉಪಸ್ಥಿತರಿದ್ದರು.






