
ನೆಮ್ಮಾರು: ಶಾಖೆಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ ಹಾಗೂ ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ಫಲಾನುಭವಿಗಳನ್ನು ತಾಲೂಕು ಆರ್ಥಿಕ ಸಾಕ್ಷರತಾ ಕೇಂದ್ರದ ಮುಖ್ಯ ಪ್ರಸಾರಕರಾದ ಶ್ರೀಮತಿ ನಿಷ್ಮಾ ಸಂದರ್ಶಿಸಿದರು; ಇತ್ತೀಚೆಗೆ (31-10-2025) ಕೆರೆಕಟ್ಟೆ ಪ್ರದೇಶದ ಕೆರೆಮನೆ ಗ್ರಾಮದಲ್ಲಿ ನಡೆದ ದುರದೃಷ್ಟಕರ ಆನೆದಾಳಿಯಲ್ಲಿ ಮೃತರಾದ ಶ್ರೀ ಹರೀಶ್ ಶೆಟ್ಟಿ ಹಾಗೂ ಉಮೇಶ್ ರವರ ನಾಮಿನಿಗಳಾದ ಆಶಾ ಶೆಟ್ಟಿ ಮತ್ತು ಉಷಾ ಅವರ ಖಾತೆಗಳಿಗೆ ಸಂಬಂಧಿತ ವಿಮಾ ಪರಿಹಾರಗಳು ಜಮೆಯಾಗಿವೆ ಎಂದು ಶಾಖಾ ವ್ಯವಸ್ಥಾಪಕ ಶ್ರೀ ಗಿರಿಧರ ಆಚಾರ್ಯ ದೃಢೀಕರಿಸಿದರು; ಈ ಸಂದರ್ಭದಲ್ಲಿ ಆರ್ಥಿಕ ಸಾಕ್ಷರತಾ ಪ್ರಸಾರಕಿ ಶ್ರೀಮತಿ ನಿಷ್ಮಾ ಮೃತರ ಸಂತ್ರಸ್ತರಿಗೆ ಸಾಂತ್ವನ ತಿಳಿಸಿ, ಯೋಜನೆಯ ಲಾಭವನ್ನು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚು ಪ್ರಚಾರ ಮಾಡುವ ಅಗತ್ಯವಿದೆ ಎಂದು ತಿಳಿಸಿ ಆಶಾ ಶೆಟ್ಟಿ ಹಾಗೂ ಉಷಾ ಅವರ ಸಹಕಾರವನ್ನು ಕೋರಿದರು; ಎಲ್ಲ ಭಾರತೀಯರೂ ವಿಮಾ ರಕ್ಷೆಯ ಲಾಭ ಪಡೆಯಬೇಕೆಂಬ ಉದ್ದೇಶದಿಂದ ಹಂಚಿನಕೂಡಿಗೆಯಂಥ ದುರ್ಗಮ ಗ್ರಾಮಗಳಲ್ಲೂ ತಾಲೂಕು ಆರ್ಥಿಕ ಸಾಕ್ಷರತಾ ಕೇಂದ್ರವು ಆರೋಗ್ಯ ಇಲಾಖೆ ಹಾಗೂ ನೆಮ್ಮಾರು ಕರ್ನಾಟಕ ಗ್ರಾಮೀಣ ಬ್ಯಾಂಕಿನ ಸಹಯೋಗದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಸಾರ್ವಜನಿಕರು ತಮ್ಮ ಉಳಿತಾಯ ಖಾತೆಗಳ ಮೂಲಕ ಬ್ಯಾಂಕ್ ಹಾಗೂ ಪೋಸ್ಟ್ ಆಫೀಸುಗಳಲ್ಲಿ ಪ್ರಧಾನಮಂತ್ರಿ ಸುರಕ್ಷಾ ಹಾಗೂ ಪ್ರಧಾನಮಂತ್ರಿ ಜೀವನ ಜ್ಯೋತಿ ಯೋಜನೆಗಳಡಿ ಗರಿಷ್ಠ ₹4,00,000 ಅಪಘಾತ ವಿಮಾ ಯೋಜನೆಗಳಿಗೆ ನೋಂದಾಯಿಸಿಕೊಳ್ಳುವಂತೆ ಆಗ್ರಹಿಸಲಾಯಿತು.




