ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ಎರಡನೇ ಅವಧಿಯ ಮುಖ್ಯಮಂತ್ರಿ ಡಿ.ಕೆ.ಶಿ ತಮ್ಮ ಸಚಿವ ಸಂಪುಟ ವಿಸ್ತರಿಸಲು ಹಲವು ಬಾರಿ ಯತ್ನಿಸಿದ್ದು, ನಾನಾ ಕಾರಣಗಳಿಂದ ಮುಂದೂಡುವಂತಾಗಿತ್ತು. ಇದೀಗ ಸಂಪುಟ ಪುನಾರಚನೆಗೆ ಸಮಯ ಕೂಡಿ ಬಂದಿದ್ದು, ವಿಶೇಷವಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾನೂನು ಹೋರಾಟ ಮೂಲಕ ಅಧಿಕಾರ ಪಡೆದ ಗಾಯತ್ರಿ ಶಾಂತೇಗೌಡರಿಗೂ ಅವಕಾಶ ಸಿಕ್ಕಿದೆ. ಇವರೊಂದಿಗೆ ಪಿ.ಎಂ ನರೇಂದ್ರ ಸ್ವಾಮಿ, ಶಿವರಾಜ್ ತಂಗಡಗಿ, ರುದ್ರಪ್ಪ ಲಮಾಣಿ, ಕೆ.ಎಸ್ ಬಸವಂತಪ್ಪ, ಬಿ. ನಾಗೇಂದ್ರ, ಟಿ. ರಘುಮೂರ್ತಿ, ಜಮೀರ್ ಅಹ್ಮದ್ ಖಾನ್, ರಿಜ್ವಾನ್ ಅರ್ಷದ್, ಸಂತೋಷ್ ಲಾಡ್, ಮಧು ಬಂಗಾರಪ್ಪ, ಪುಟ್ಟುರಂಗಶೆಟ್ಟಿ, ಮಂಕಾಳವೈದ್ಯ, ಡಾ.ಅಜಯ್ ಸಿಂಗ್, ಎನ್ ಚೆಲುವರಾಯ ಸ್ವಾಮಿ, ಕೆ.ಎಮ್ ಶಿವಲಿಂಗೇಗೌಡ, ಹೆಚ್.ಸಿ ಬಾಲಕೃಷ್ಣ, ಬಸವರಾಜ್ ರಾಯರೆಡ್ಡಿ, ವಿಜಯಾನಂದ್ ಕಾಶಪ್ಪನವರ್, ಲಕ್ಷ್ಮಣ ಸವದಿ ಸೇರಿದಂತೆ ಇಂದು 20 ಮಂದಿ ನೂತನ ಸಚಿವರು ಡಿಕೆಶಿ ಸಂಪುಟದ ರಥ ಏರಲಿದ್ದಾರೆ.

