
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ವರುಣದೇವನ ಉಗ್ರತ್ವಕ್ಕೆ ಸಾಕ್ಷಿಯಾದ ಕಳಸ ತಾಲೂಕು. ಕಳಸ ತಾಲೂಕಿನ ಸಂಸೆ ಸಮೀಪದ ಹೊಸಮಠ ಗ್ರಾಮದಲ್ಲಿ ಅಶೋಕ್ ಎಂಬುವರ ಕೃಷಿ ತೋಟಕ್ಕೆ ನುಗ್ಗಿದ ಭದ್ರಾ ನದಿಯ ನೀರಿನ ಅಬ್ಬರಕ್ಕೆ ಮಣ್ಣು
ಕೊಚ್ಚಿ ಹೋದ ಪರಿಣಾಮವಾಗಿ ಬುಡ ಸಮೇತ ಕಾಫಿ, ಅಡಿಕೆ ಸಸಿಗಳು, ಬಾಳೆ, ಏಲಕ್ಕಿ ಗಿಡಗಳು ನಾಶವಾಗಿವೆ. ತೋಟದ ಜೊತೆ ಮನೆಗೂ ನುಗ್ಗಿದ ಮಳೆ ನೀರಿನಿಂದಾಗಿ ಗೃಹಪಯೋಗಿ ವಸ್ತುಗಳು ಸಹ ನಾಶವಾಗಿದ್ದು, ಧರ್ಮಸ್ಥಳ
ಸಂಘದಲ್ಲಿ ಸಾಲ ಮಾಡಿ ತೋಟ ಬೆಳೆಸಿದ್ದು, ತೊಟದ ಸದ್ಯದ ಸ್ಥಿತಿ ಕಂಡು ಅಶೋಕ್ ದಂಪತಿ ಕಣ್ಣೀರಿಟ್ಟರು. ಈ ಬೆಳೆ ನಾಶಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರಕ್ಕೆ ಅಶೋಕ್ ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ವರದಿ: ಸಂತೋಷ್ ಅತ್ತಿಗೆರೆ




