ಕಾರ್ಕಳ: ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಭಾ (ರಿ.), ಕಾರ್ಕಳ ಇದರ 83ನೇ ವಾರ್ಷಿಕ ಮಹಾಸಭೆಯು ಪೆರುವಾಜೆಯ ವಿಶ್ವಕರ್ಮ ಸಮಾಜ ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಎನ್. ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಲಭ್ಯವಿರುವ ವಿವಿಧ ಸಾಲ ಸೌಲಭ್ಯಗಳ ಕುರಿತು ಮಾಹಿತಿ ನೀಡಿ ಸಮಾಜದ ಶೈಕ್ಷಣಿಕ ಚಟುವಟಿಕೆಗಳನ್ನು ಶ್ಲಾಘಿಸಿದರು. ಸಭೆಯ ಅಧ್ಯಕ್ಷರಾದ ಬಿ. ಪ್ರಕಾಶ್ ಆಚಾರ್ಯ ಅವರು ಸಂಘಟನೆಗಳ ಬೆಳವಣಿಗೆಗೆ ಎಲ್ಲರ ಸಹಕಾರ ಹಾಗೂ ಒಗ್ಗಟ್ಟು ಅಗತ್ಯವೆಂದು ತಿಳಿಸಿದರು. ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಶಿಲ್ಪಿ ರಾಮಚಂದ್ರ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷರು ಬಿ. ಪ್ರಕಾಶ್ ಆಚಾರ್ಯ ಸ್ವಾಗತಿಸಿ, ಕಾರ್ಯದರ್ಶಿ ಶಿಲ್ಪಿ ಭಾಸ್ಕರ್ ಬಿ.ಎಸ್. ಆಚಾರ್ಯ ವಾರ್ಷಿಕ ವರದಿ ಹಾಗೂ ಕೋಶಾಧಿಕಾರಿ ಪಿ. ವಸಂತ್ ಆಚಾರ್ಯ ಲೆಕ್ಕಪತ್ರ ಮಂಡಿಸಿದರು. ಕೆ. ವಿಶ್ವನಾಥ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ಅಶೋಕ್ ಆಚಾರ್ಯ ವಂದಿಸಿದರು. ಇದೇ ವೇಳೆ 2026–27ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಬಿ. ಪ್ರಕಾಶ್ ಆಚಾರ್ಯ ಪುನರಾಯ್ಕೆಯಾಗಿದ್ದರೆ, ಕಾರ್ಯದರ್ಶಿಯಾಗಿ ಶಿಲ್ಪಿ ಭಾಸ್ಕರ್ ಬಿ.ಎಸ್. ಆಚಾರ್ಯ, ಉಪಾಧ್ಯಕ್ಷರಾಗಿ ಅಶೋಕ್ ಆಚಾರ್ಯ (ಅಂಡಾರು), ಕೋಶಾಧ್ಯಕ್ಷರಾಗಿ ಪಿ. ವಸಂತ್ ಆಚಾರ್ಯ, ಜೊತೆ ಕಾರ್ಯದರ್ಶಿಯಾಗಿ ರಮೇಶ್ ಆಚಾರ್ಯ (ಕಾರ್ಕಳ), ಕ್ರೀಡಾ ಕಾರ್ಯದರ್ಶಿಯಾಗಿ ಅರುಣ್ ಆಚಾರ್ಯ (ಸಾಲ್ಮರ), ಉಪ ಕೋಶಾಧ್ಯಕ್ಷರಾಗಿ ಜೈರಾಂ ಆಚಾರ್ಯ (ಕಾರ್ಕಳ) ಹಾಗೂ ಸದಸ್ಯರಾಗಿ ಶಿಲ್ಪಿ ರಾಮಚಂದ್ರ ಆಚಾರ್ಯ, ಸುರೇಶ್ ಆಚಾರ್ಯ (ನಿಟ್ಟೆ), ಸುದಾಕರ ಆಚಾರ್ಯ (ಬಂಗ್ಲೆಗುಡ್ಡೆ), ಸುರೇಶ್ ಆಚಾರ್ಯ (ಸಾಲ್ಮರ), ಎಂ. ರಮೇಶ್ ಆಚಾರ್ಯ, ಎಂ.ಎಸ್. ಮೌನೇಶ್ ಆಚಾರ್ಯ, ಕೆ. ವಿಶ್ವನಾಥ ಆಚಾರ್ಯ ಮತ್ತು ಕೆ. ದಿನೇಶ್ ಆಚಾರ್ಯ ಆಯ್ಕೆಯಾದರು. ಇದೇ ಸಂದರ್ಭದಲ್ಲಿ ವ್ಯಕ್ತಿತ್ವ ವಿಕಸನ ಶಿಬಿರ, ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ಹಾಗೂ ದತ್ತಿನಿಧಿ ವಿತರಣಾ ಕಾರ್ಯಕ್ರಮವೂ ನಡೆಯಿತು. ಶಿಲ್ಪಿ ರಾಮಚಂದ್ರ ಆಚಾರ್ಯ ದೀಪ ಬೆಳಗಿಸಿ ಉದ್ಘಾಟಿಸಿ ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳುವುದು ಜೀವನದಲ್ಲಿ ಯಶಸ್ಸಿಗೆ ಮುಖ್ಯವೆಂದು ತಿಳಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ನೀತಾ ಶೆಟ್ಟಿ, ಶರತ್ ಹಾಗೂ ರಿಷಿ ಜೈನ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದು, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ದತ್ತಿನಿಧಿ ಮತ್ತು ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಕಾರ್ಯಕ್ರಮದ ವರದಿಯನ್ನು ಕೆ. ದಿನೇಶ್ ಆಚಾರ್ಯ ಮಂಡಿಸಿ, ಜಯರಾಮ ಆಚಾರ್ಯ ವಂದಿಸಿದರು.
