
ಕೊಪ್ಪ: ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಪರಮಪೂಜ್ಯ ಜಗದ್ಗುರುಗಳಾದ ಶ್ರೀ ಶ್ರೀ ಭಾರತೀ ತೀರ್ಥ ಮಹಾಸನ್ನಿಧಾನಂಗಳವರ ಪರಮಾನುಗ್ರಹದಿಂದ ಪರಮಪೂಜ್ಯ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಮಹಾಸನ್ನಿಧಾನಂಗಳವರು ಕೊಪ್ಪ, ನರಸಿಂಹರಾಜಪುರ ಮತ್ತು ಶೃಂಗೇರಿ ತಾಲ್ಲೂಕಿನ ಸಾರ್ವಜನಿಕರ ಆರೋಗ್ಯ ತುರ್ತು ಸಂದರ್ಭಗಳ ಅನುಕೂಲಕ್ಕಾಗಿ ಅತ್ಯಾಧುನಿಕ ಅಂಬ್ಯುಲೆನ್ಸ್ ಸೇವೆಯನ್ನು ಅನುಗ್ರಹಿಸಿದರು.
ಗ್ರಾಮೀಣ ಭಾಗದಲ್ಲಿ ತುರ್ತು ವೈದ್ಯಕೀಯ ಸೌಲಭ್ಯದ ಕೊರತೆಯನ್ನು ನೀಗಿಸುವ ಉದ್ದೇಶದಿಂದ ಈ ಸೇವೆಯನ್ನು ಆರಂಭಿಸಲಾಗಿದ್ದು, ಅಪಘಾತ, ಹೆರಿಗೆ, ಹೃದಯಾಘಾತ ಹಾಗೂ ಇನ್ನಿತರ ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ತ್ವರಿತವಾಗಿ ಆಸ್ಪತ್ರೆಗೆ ಸಾಗಿಸಲು ಈ ಅಂಬ್ಯುಲೆನ್ಸ್ ಬಳಕೆಯಾಗಲಿದೆ. ಈ ಸೇವೆಯು ಮೂರು ತಾಲ್ಲೂಕಿನ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ವಿಶೇಷ ಅನುಕೂಲವನ್ನು ಒದಗಿಸಲಿದೆ. ಈ ವೇಳೆ ಕೊಪ್ಪ ತಾಲ್ಲೂಕಿನ ನುಗ್ಗಿ ಗ್ರಾಮದ ಬಡಿಗೆ ಶ್ರೀ ವನದುರ್ಗಪರಮೇಶ್ವರಿ ದೇವಸ್ಥಾನ ಸಮಿತಿಯ ನುಗ್ಗಿ ಜಗದೀಶ್, ಬಿ.ಕೆ ರಮೇಶ್, ಶ್ರೀಕರ್, ಚಂದ್ರಶೇಖರ್, ರವಿ ಮತ್ತಿತರು ಇದ್ದರು.




