
ಕಾರ್ಕಳ: ನೆಕ್ಲಾಜೆ ಶ್ರೀ ಕಾಳಿಕಾಂಬ ದೇವಸ್ಥಾನದ ಅಂಗ ಸಂಸ್ಥೆಯಾದ ಭಜನಾ ಸೇವಾ ಸಮಿತಿಯ 2026–27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇತ್ತೀಚೆಗೆ ನೆರವೇರಿತು. ಸಮಿತಿಯ ಅಧ್ಯಕ್ಷರಾಗಿ ಕರುಣಾಕರ ಆಚಾರ್ಯ, ಕಾರ್ಯದರ್ಶಿಯಾಗಿ ಪ್ರಸಾದ್ ಆಚಾರ್ಯ (ಹಿರಿಯಂಗಡಿ), ಉಪಾಧ್ಯಕ್ಷರಾಗಿ ದಿವಾಕರ್ ಆಚಾರ್ಯ (ನಿಟ್ಟೆ), ಕೋಶಾಧಿಕಾರಿಯಾಗಿ ಪಿ. ರವಿ ಆಚಾರ್ಯ ಹಾಗೂ ಜೊತೆ ಕಾರ್ಯದರ್ಶಿಯಾಗಿ ಗಿರೀಶ್ ಆಚಾರ್ಯ (ಬೈಲೂರು) ಆಯ್ಕೆಯಾಗಿ ಪದಗ್ರಹಣ ಮಾಡಿದರು. ಇದೇ ವೇಳೆ ನೂತನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಎಂ. ರಮೇಶ್ ಆಚಾರ್ಯ (ಅಂಡಾರು), ಅಶೋಕ್ ಆಚಾರ್ಯ, ರಮೇಶ್ ಆಚಾರ್ಯ (ಬಂಗ್ಲೆಗುಡ್ಡೆ), ಧನುಷ್ ಆಚಾರ್ಯ, ಜೀವನ್ ಆಚಾರ್ಯ, ವೈ.ಟಿ. ಪ್ರಕಾಶ್ ಆಚಾರ್ಯ, ಕೆ. ವಿಜೇಂದ್ರ ಆಚಾರ್ಯ, ಸತೀಶ್ ಆಚಾರ್ಯ, ಹರೀಶ್ ಪಡ್ರೆ ಹಾಗೂ ಪ್ರವೀಣ್ ಆಚಾರ್ಯ ಅವರನ್ನು ಆಯ್ಕೆ ಮಾಡಲಾಯಿತು. ನೂತನ ಪದಾಧಿಕಾರಿಗಳು ಮತ್ತು ಸದಸ್ಯರು ಭಜನಾ ಸೇವಾ ಸಮಿತಿಯ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಚಟುವಟಿಕೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಸಂಘಟಿಸುವುದರೊಂದಿಗೆ, ದೇವಸ್ಥಾನದ ಭಜನಾ ಸೇವೆ, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಮಾಜಮುಖಿ ಸೇವಾ ಕಾರ್ಯಗಳನ್ನು ಹೆಚ್ಚಿನ ಉತ್ಸಾಹದಿಂದ ಮುನ್ನಡೆಸುವ ಸಂಕಲ್ಪ ವ್ಯಕ್ತಪಡಿಸಿದರು.
ವರದಿ: ಅರುಣ್ ಭಟ್ ಕಾರ್ಕಳ




