
ಶೃಂಗೇರಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಶೃಂಗೇರಿ ತಾಲೂಕು ವತಿಯಿಂದ ಆ.16ರಂದು ವಿದ್ಯಾರಣ್ಯಪುರದ ವಿದ್ಯಾಶಂಕರ್ ಬಾಪಟ್ ಅವರ ಗದ್ದೆಯಲ್ಲಿ ಕೆಸರುಗದ್ದೆ ಸಾಂಘಿಕ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಂಗವಾಗಿ ಕೆಸರುಗದ್ದೆ ಓಟ, ಹಗ್ಗಜಗ್ಗಾಟ ಸೇರಿದಂತೆ ವಿವಿಧ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಲಾಗಿದ್ದು, ವಯೋಮಿತಿ ಹಾಗೂ ಗಂಡು-ಹೆಣ್ಣು ಎಂಬ ಯಾವುದೇ ಭೇದವಿಲ್ಲದೆ 250ಕ್ಕೂ ಹೆಚ್ಚು ಮಂದಿ ಉತ್ಸಾಹದಿಂದ ಭಾಗವಹಿಸಿದರು. ಭಾರತಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಕೆಸರುಗದ್ದೆ ಸಾಂಘಿಕ್ಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗದ್ದೆಯ ಸುತ್ತಲೂ ಕೇಸರಿ ಬಣ್ಣದ ಬಂಟಿಂಗ್ಸ್ ಹಾಗೂ ಧ್ವಜಗಳಿಂದ ಅಲಂಕರಿಸಲಾಗಿತ್ತು. ಆಟಗಳು ಮನಸನ್ನ ದೇಶವನ್ನ ಎಲ್ಲಾ ಭೇದಗಳನ್ನು ಮರೆತು ಜೋಡಿಸತ್ತೆ, ಕೆಸರಿನ ಜೊತೆಗೆ ಆಡುತ್ತ ನಮಗೆ ನಮ್ಮ ಬಾಲ್ಯ ನೆನಪಾಗಿ ಪ್ರಕೃತಿ ಮತ್ತು ನಮ್ಮ ಭಾಂದವ್ಯ ನೆನಪಾಗತ್ತೆ. 100 ವರ್ಷಗಳ ಹಿಂದೆ ಹಿಂದೂಗಳ ಸಂಘಟನೆ ಮಾಡೋದಿಕ್ಕೆ ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿಯಲ್ಲಿ ಡಾಕ್ಟರ್ ಜಿ ಅವರು ಸ್ವದೇಶೀ ಆಟದ ಮೂಲಕ ಒಂದು ಗಂಟೆ ನಿತ್ಯ ಹಿಂದೂಗಳನ್ನು ಸೇರಿಸುವ ಮೂಲಕ ಒಂದು ದೊಡ್ಡ ದಾರಿಯನ್ನು ಹಾಕಿಕೊಟ್ಟರು. ಕೇವಲ 17 ಜನರಿಂದ ಶುರುವಾದ ಆರ್ ಎಸ್ ಎಸ್ ಈಗ ಜಗತ್ತಿನ ನಂಬರ್ ಒನ್ ಸಂಘಟನೆಯಾಗಿದ್ದು, ವ್ಯಕ್ತಿ ನಿರ್ಮಾಣದಿಂದ ಸಮಾಜ ಪರಿವರ್ತನೆ ಕಾರಣಕ್ಕೆ ದೇಶದಲ್ಲಿ ನೂರಾರು ಬದಲಾವಣೆ, ಕಾಶ್ಮೀರದ ಮೂಲೆ ಮೂಲೆಯಲ್ಲಿ ತಿರಂಗ ಹಾರಡಿದೆ, ಕೆಂಪುಕೋಟೆಯಲ್ಲಿ ಪೂರ್ಣ ವಂದೇ ಮಾತಾರಂ ಹಾಡಲಾಗಿದ್ದು, ಇದಕ್ಕೆ ಕಾರಣ ಆಟದ ಮೂಲಕ ದೇಶಭಕ್ತಿ. ಇತ್ತೀಚಿನ ಬೆಳವಣಿಗೆ ಜಂಥರ್ ಮಂಥರ್ ಹೋರಾಟದಲ್ಲಿ ದೇಶವಿರೋಧಿ ಘೋಷಣೆಗಳು, ದೇಶ ಒಡೆಯುವ ಮನಸ್ಥಿತಿಗಳು. ನಿಜವಾದ ವಿದ್ಯಾರ್ಥಿ ಹೊರಟಕ್ಕೆ ನಮ್ಮ ಬೆಂಬಲವಿದ್ದು, Gen- ಝೆಡ್ ಇವತ್ತು ನೆನ್ನೆದಲ್ಲ ಅದು ರಾಮಾಯಣ ಮಹಾಭಾರತ ಕಾಲದಲ್ಲೂ gen – z ಇದ್ರು, ನಾವು ಕೂಡ ಒಂದು ಕಾಲದಲ್ಲಿ gen- z ಆಗಿದ್ವಿ, ಭಗತ್ ಸಿಂಗ್ ಅಜಾದ್ ಕುದಿರಾಮ್ ಬೋಸ್ ಇವರೆಲ್ಲ gen – z ವಯಸ್ಸಲ್ಲೇ ದೇಶಕ್ಕಾಗಿ ಹೋರಡಿದ್ದು. ನಾವೆಲ್ಲರೂ ನಮ್ಮ ಮಕ್ಕಳನ್ನು ದೇಶ ಭಕ್ತ ರಾಷ್ಟ್ರ ಮೊದಲು ಎನ್ನುವ ಮಾನಸಿಕತೆಯಲ್ಲಿ ಬೆಳಸಬೇಕು ಅದಕ್ಕೆ ದಾರಿ ಆರ್ ಎಸ್ ಎಸ್ ಶಾಖೆ ಸಾಂಘಿಕ್ ಗಳು, ಇದು ನಮ್ಮ ಸಮಾಜ ಜವಾಬ್ದಾರಿ. ಮುಂಬರುವ ರಕ್ಷಾಬಂಧನ ಮತ್ತು ಎಲ್ಲಾ ಗ್ರಾಮದಲ್ಲೂ ಶಾಖೆ ಮಾಡಲು ಈ ಸಾಂಘಿಕ್ ಪ್ರೇರಣೆ ಕೊಡಲಿ ಮತ್ತು ಈ ಪುಣ್ಯದ ಮಣ್ಣು ನಮ್ಮೆಲ್ಲ ಸಂಘಟನೆಗೆ ಇನ್ನೂ ಹೆಚ್ಚು ಶಕ್ತಿ ಪ್ರೇರಣೆ ಕೊಡಲಿ, ಜಾತಿ ಬೇಧವಿಲ್ಲದೆ ಸಮಾಜದ ಎಲ್ಲಾ ಬಂದುಗಳನ್ನು ತಲುಪುವ ಕೆಲಸ ಮಾಡೋಣ ಎಂದು ಶೃಂಗೇರಿ ಜಿಲ್ಲಾ ಕಾರ್ಯವಾಹ ನೂತನ್ ಸೂರ್ಯ ತಿಳಿಸಿದರು. ಈ ಸಂದರ್ಭದಲ್ಲಿ ಸಂತೋಷ್ ಕೆರೆಮನೆ, ಆದರ್ಶ ಕಾಂಚಿನಗರ, ರವಿಸಂಜಯ್, ಕಿರಣ ಶೃಂಗೇರಿ, ಮೋಹನ್ ರಾಜ್, ಕಿರಣ್ ಹುಕ್ಳಿ, ವಿಶ್ವನಾಥ್ ಮಾನಗಾರು, ಶಂಕರನಾರಾಯಣ, ಹೆಚ್ ಎಸ್ ವೇಣುಗೋಪಾಲ್, ಟಿ ಕೆ ಪರಾಶರ, ರಾಘವೇಂದ್ರ ಹಂಚಲಿ, ಅನಿರುದ್ಧ ಕೊರಡಕಲ್ಲು ಉಪಸ್ಥಿತರಿದ್ದರು.




