
ಬ್ಯಾಂಕಿಂಗ್ ವಲಯದಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳವ ಅಭ್ಯರ್ಥಿಗಳಿಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಒಂದು ಅವಕಾಶವನ್ನು ನೀಡಿದ್ದು, ದೇಶಾದ್ಯಂತ ಇರುವ ತನ್ನ ವಿವಿಧ ಶಾಖೆಗಳು ಮತ್ತು ಕಚೇರಿಗಳಲ್ಲಿ 2026-27ನೇ ಸಾಲಿನ ಅಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಬೃಹತ್ ಅಧಿಸೂಚನೆಯನ್ನು ಹೊರಡಿಸಿದೆ. ಒಟ್ಟು 395ಖಾಲಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ, B.Com, BE/ B.Tech, MBA, CA, MCA, CMA, CS, M.Tech ಅಥವಾ M.Sc ಉತ್ತೀರ್ಣರಾಗಿರಬೇಕಾಗಿದ್ದು, ಸಂಬಂಧಿತ ಹುದ್ದೆಗೆ ಅನುಗುಣವಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಡ್ಡಾಯ ಕಾರ್ಯಾನುಭವವನ್ನು ಹೊಂದಿರಬೇಕು. 22 ರಿಂದ 50 ವರ್ಷಗಳ ನಡುವಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಸರ್ಕಾರದ ನಿಯಮಾವಳಿಗಳ ಪ್ರಕಾರ SC/SಖT ಅಭ್ಯರ್ಥಿಗಳಿಗೆ 5 ವರ್ಷಗಳು, OBC ಅಭ್ಯರ್ಥಿಗಳಿಗೆ 3 ವರ್ಷಗಳು ಹಾಗೂ ದಿವ್ಯಾಂಗ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಹುದ್ದೆಗಳ ವಿವರ ಮತ್ತು ಹಂಚಿಕೆ:
ಮ್ಯಾನೇಜರ್: 163 ಹುದ್ದೆಗಳು
ಹಿರಿಯ ವ್ಯವಸ್ಥಾಪಕ / ಸೀನಿಯರ್ ಮ್ಯಾನೇಜರ್: 153 ಹುದ್ದೆಗಳು
ಮುಖ್ಯ ವ್ಯವಸ್ಥಾಪಕ / ಚೀಫ್ ಮ್ಯಾನೇಜರ್: 52 ಹುದ್ದೆಗಳು
ಸಹಾಯಕ ಜನರಲ್ ಮ್ಯಾನೇಜರ್ / ಎಜಿಎಂ: 20 ಹುದ್ದೆಗಳು
ಡೆಪ್ಯೂಟಿ ಜನರಲ್ ಮ್ಯಾನೇಜರ್: 07 ಹುದ್ದೆಗಳು
ಅಭ್ಯರ್ಥಿಗಳನ್ನು ಆನ್ಲೈನ್ ಪರೀಕ್ಷೆ, ಗುಂಪು ಚರ್ಚೆ, ವೈಯಕ್ತಿಕ ಸಂದರ್ಶನ, ದಾಖಲೆಗಳ ಪರಿಶೀಲನೆ ಹಾಗೂ ವೈದ್ಯಕೀಯ ತಪಾಸಣೆಯ ಆಧಾರದ ಮೇಲೆ ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಯ ಶ್ರೇಣಿಗೆ ಅನುಗುಣವಾಗಿ ತಿಂಗಳಿಗೆ 64,824 ರಿಂದ 1,56,500 ರೂ. ವರೆಗೆ ಮೂಲ ವೇತನ ದೊರೆಯಲಿದ್ದು, ಇದರೊಂದಿಗೆ ಬ್ಯಾಂಕ್ ನಿಯಮಗಳ ಪ್ರಕಾರ ಇತರ ಭತ್ಯೆಗಳು ಮತ್ತು ಸೌಲಭ್ಯಗಳು ಲಭ್ಯವಿರುತ್ತವೆ. ಜುಲೈ 21, 2026 ರಿಂದ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.




