
ಶೃಂಗೇರಿ: ಕನ್ನಡ ಸಾಹಿತ್ಯ ಪರಿಷತ್ ಶ್ರಾವಣ ಮಾಸದ ಅಂಗವಾಗಿ ಕವಿ -ಕಾವ್ಯ- ಗಾಯನ ಶ್ರಾವಣ- 26 ಎಂಬ ಕಾರ್ಯ ಕ್ರಮವನ್ನು ಕನ್ನಡ ಭವನದಲ್ಲಿ ಆಯೋಜಿಸಿದೆ ಎಂದು ಪರಿಷತ್ತಿನ ಅಧ್ಯಕ್ಷರಾದ ಡಾ. ಆಗುಂಬೆ ಗಣೇಶ್ ಹೆಗ್ಡೆ ತಿಳಿಸಿದರು.
ಕನ್ನಡ ಭವನದಲ್ಲಿ ಕಾರ್ಯ ಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪ್ರಸ್ತುತ ಶ್ರಾವಣ ಮಾಸದ ನಿಸರ್ಗ ಚೆಲುವಿನ ಮನಮೋಹಕವಾದ ತಿಂಗಳಿನಲ್ಲಿ ಕವಿಗಳ ವರ್ಣನೆಯ ಗೀತ ಗಾಯನವನ್ನು ವ್ಯಾಖ್ಯಾನ ಸಹಿತವಾಗಿ ನಡೆಸಲ್ಪಡುವ ಈ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ದತ್ತಾತ್ತೇಯ ಯಾಜಿ ಉದ್ಘಾಟಿಸಿ ಚಾಲನೆ ನೀಡಲಿದ್ದಾರೆ. ಕನ್ನಡದ ಖ್ಯಾತ ಕವಿಗಳ ರಚನೆಯ ಗೀತ ಗಾಯನವನ್ನು ಸ್ಥಳೀಯ ಗಾಯಕರಾದ ಚಂದ್ರಶೇಖರ್ ಮೆಣಸೆ, ಬೆಳಂದೂರ್ ಗಣೇಶ್ ಪ್ರಸಾದ್, ಸಣ್ಣಾನೆಗುಂದ ಗೋಪಾಲ್ ಕೃಷ್ಣ, ಶಿವಾನಂದ್ ಭಟ್ ಹೇರೂರು, ಸಹನಾ ಅಡ್ಡಗದ್ದೆ, ಉಂಟೊಳ್ಳಿ ಗಾಯತ್ರಿ, ಕೂತುಗೋಡು ಸಂತೋಷ್, ಹಾಡಲಿದ್ದು, ಕವಿ ಕಾವ್ಯ ರಚನೆಯ ಈ ಗೀತೆಗಳಿಗೆ ವ್ಯಾಖ್ಯಾನವನ್ನು ಎಸ್.ಗುರುಮೂರ್ತಿ, ಡಾ. ಬಿ ಶಿವಶಂಕರ . ಚೇತನ್ ಕಲ್ಲಾಳಿ, ಮಂಜುನಾಥ ಗೌಡ, ಪುಷ್ಪಾಲಕ್ಷ್ಮೀನಾರಾಯಣ. ಎಂ,ಎಸ್, ಜನಾರ್ಧನ ಮಂಡಗಾರು, ಹೆಚ್,ಎ ಪ್ರಕಾಶ್ ರವರು ನಡೆಸಿಕೊಡಲಿದ್ದಾರೆಂದು ಅವರು ತಿಳಿಸಿದ್ದಾರೆ. ಸೆಪ್ಟೆಂಬರ್ 5 ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಈ ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಗಣೇಶ್ ಹೆಗ್ಡೆ ವಹಿಸಲಿದ್ದು ಸಾಹಿತ್ಯಾಭಿಮಾನಿಗಳು ಪಾಲ್ಗೊಳ್ಳುವಂತೆ ಕೋರಿದ್ದಾರೆ.




