ಕೋಲಾರ: ಕೋಲಾರದಲ್ಲಿ ಆರ್ಟಿಓ ಅಧಿಕಾರಿಗಳು ಅಂತರಾಜ್ಯ ಖಾಸಗಿ ಬಸ್ಗಳ ಮೇಲೆ ದಾಳಿ ನಡೆಸಿ ತೆರಿಗೆ ವಂಚನೆ, ಎಫ್ಸಿ ಕೊರತೆ, ಸುರಕ್ಷತಾ ಸಾಧನೆಗಳ ಕೊರತೆ ಮತ್ತು ತುರ್ತು ದ್ವಾರಗಳಿಲ್ಲದಿರುವಿಕೆ ಸೇರಿದಂತೆ ಹಲವು ನಿಯಮ ಉಲ್ಲಂಘನೆಗಳ ಹಿನ್ನಲೆಯಲ್ಲಿ 30ಕ್ಕೂ ಅಧಿಕ ಬಸ್ಗಳನ್ನು ಜಪ್ತಿ ಮಾಡಿ 1 ಕೋಟಿಗೂ ಹೆಚ್ಚು ದಂಡ ವಸೂಲಿ ಮಾಡಿದ್ದಾರೆ. ಕರ್ನೂಲು ಬಸ್ ದುರಂತದ ನಂತರ ನಡೆದ ಈ ಕಾರ್ಯಚರಣೆಯಲ್ಲಿ ಮಲ್ಟಿಎಕ್ಸೆಲ್, ಸ್ಲೀಪರ್ ಮತ್ತು ಎಸಿ ಟ್ರಾವೆಲ್ ಬಸ್ ಸೀಜ್ ಆಗಿದ್ದು, ಪ್ರಯಾಣಿಕರು ಕೆಎಸ್ಆರ್ಟಿಸಿ ಗೆ ವರ್ಗಾವಣೆಯಾಗಿದ್ದು, ಈ ದಾಳಿಗೆ ಖಾಸಗಿ ಟ್ರಾವೆಲ್ಸ್ಗಳು ಆಕ್ರೋಶ ವ್ಯಕ್ತಪಡಿಸಿ ಕೋರ್ಟ್ಗೆ ಹೋಗುವುದಾಗಿ ಹೇಳಿವೆ.
