
ಚಿಕ್ಕಮಗಳೂರು: ಕಳಸ ತಾಲೂಕಿನ ಕುದುರೆಮುಖ ವೃತ್ತದ ಬಾರ್ನಲ್ಲಿ ಮದ್ಯದ ಅಮಲಿನಲ್ಲಿ ನಾಲ್ವರು ಸೇರಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಬಾರ್ ಮುಂದೆ ವ್ಯಕ್ತಿಯೊಬ್ಬ ಕೈಕಟ್ಟಿ ನಿಂತಿದ್ದ ವೇಳೆ, “ನಮ್ಮ ಮುಂದೆಯೇ ಕೈಕಟ್ಕೊಂಡು ನಿಲ್ತಿಯಾ” ಎಂದು ಪ್ರಶ್ನಿಸಿ ನಾಲ್ವರು ಆತನ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. WWF ಫೈಟಿಂಗ್ನಂತೆ ವ್ಯಕ್ತಿಯನ್ನು ಎತ್ತಿಹಾಕಿ ನೆಲಕ್ಕೆ ಬೀಳಿಸಿ, ಕಾಲಿನಿಂದ ತುಳಿದು ಹಲ್ಲೆ ನಡೆಸಿರುವ ದೃಶ್ಯಗಳು ಸೆರೆಯಾಗಿವೆ. ಮದ್ಯದ ಅಮಲಿನಲ್ಲಿದ್ದ ನಾಲ್ವರು ವ್ಯಕ್ತಿಯ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದ್ದು, ಘಟನೆ ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.




