
ಹಿರೇಹಳ್ಳಿ: ತಾಳಮದ್ದಳೆ ಅಭಿಮಾನಿ ಬಳಗದ ವತಿಯಿಂದ ಅಗಲಗಂಡಿ ಸಮೀಪದ ಹಿರೇಹಳ್ಳಿ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಅಕ್ಟೋಬರ್ 4ರ ಭಾನುವಾರ ಮಧ್ಯಾಹ್ನ 3 ಗಂಟೆಗೆ ‘ರಾಮಾಂಜನೇಯ’ ಯಕ್ಷಗಾನ ತಾಳಮದ್ದಳೆ ಆಯೋಜಿಸಲಾಗಿದ್ದು, ಕಡಂದಲೆ ಬಿ. ರಾಮರಾವ್ ವಿರಚಿತ ಈ ಕಾರ್ಯಕ್ರಮದಲ್ಲಿ ಕು. ರಕ್ಷಾ ಹೆಗಡೆ ಸಿದ್ದಾಪುರ ಭಾಗವತರಾಗಿ, ಎನ್.ಜಿ. ಹೆಗಡೆ ಯಲ್ಲಾಪುರ ಮದ್ದಳೆಯಲ್ಲಿ ಹಾಗೂ ಮಂಗೇಶ್ ನಾಡಕರ್ಣಿ ಚೆಂಡೆಯಲ್ಲಿ ಭಾಗವಹಿಸಲಿದ್ದಾರೆ. ಮುಮ್ಮೇಳದಲ್ಲಿ ಹಿರಣ್ಯ ವೆಂಕಟೇಶ್ ಭಟ್, ರಾಧಾಕೃಷ್ಣ ಕಲ್ಚರ್, ಡಾ. ಪ್ರದೀಪ್ ಸಾಮಗ, ನಾಗೇಶ್ ಕಾಮತ್ ಶೃಂಗೇರಿ ಹಾಗೂ ಅಶ್ವತ್ ನಾರಾಯಣ ಮಾಕರ್ಸ ಭಾಗವಹಿಸಲಿದ್ದು, ತಾಳಮದ್ದಳೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಹಿರೇಹಳ್ಳಿ ರಾಮಚಂದ್ರ ಅವರು ಜೈ ಟಿವಿ ಮೂಲಕ ಆಹ್ವಾನಿಸಿದ್ದಾರೆ.




