ಕೊಟ್ಟಿಗೆಹಾರ: ಸಮೀಪದ ಗಬ್ಗಲ್ ಗ್ರಾಮದ ವಿದ್ಯಾರ್ಥಿನಿ ಹೆನಿನ್ ಸ್ವೀಡಲ್ ಪಾಯ್ಸ್ ಪಿಯುಸಿ ಪರೀಕ್ಷೆಯಲ್ಲಿ 579 ಅಂಕಗಳನ್ನು ಪಡೆದು ಶೇ 97 ಫಲಿತಾಂಶ ಸಾಧಿಸಿ ಮಲೆನಾಡಿನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಂಗಳೂರು ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಹೆನಿನ್ ಎಸ್. ಪಾಯ್ಸ್ ಮೂಲತಃ ಗಬ್ಗಲ್ ನಿವಾಸಿಯಾಗಿದ್ದು, ಹೆರಾಲ್ಡ್ ಪಾಯ್ಸ್ ಹಾಗೂ ಶಾಂತಿ ಪಾಯ್ಸ್ ದಂಪತಿಯ ಪುತ್ರಿಯಾಗಿದ್ದಾರೆ. ಅವರ ಈ ಸಾಧನೆಗೆ ಪೋಷಕರು ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.
