
ದಾವಣಗೆರೆ: ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಹೋಬಳಿಯ ಕುಳೇನೂರು ಗ್ರಾಮದಲ್ಲಿ 135ನೇ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕಾಕನೂರು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಎಸ್. ರಂಗಸ್ವಾಮಿ, ಬೈರಲಿಂಗಪ್ಪ ಶಿವಮೂರ್ತಿ, ಸಂತೇಬೆನ್ನೂರು ಪೊಲೀಸ್ ಠಾಣೆಯ ರುದ್ರೇಶ್, ಎಸ್.ಪಿ. ಕಾನ್ಸ್ಟೇಬಲ್ ಮಂಜುನಾಥ್ ಸೇರಿದಂತೆ ಕುಳೇನೂರಿನ ಹನುಮಂತಪ್ಪ, ನೀಲಪ್ಪ, ಸಚ್ಚಿನ್, ಪ್ರೊಫೆಸರ್ ರಮೇಶ್, ಸುದೀಪ್, ಚೇತ, ರಾಜಪ್ಪ ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ಕಾರ್ಯಕ್ರಮದ ಅಂಗವಾಗಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಹೂವಿನ ಹಾರಗಳನ್ನು ಅರ್ಪಿಸಲಾಯಿತು. ಎಲ್ಲಾ ಸಮಾಜದ ಬಾಂಧವರು ಒಟ್ಟಾಗಿ ಭಾಗವಹಿಸಿ ಜಯಂತಿಯನ್ನು ವೈಭವದಿಂದ ಆಚರಿಸಿದ್ದು, ಗ್ರಾಮದಲ್ಲಿ ಏಕತೆ ಮತ್ತು ಸಾಮಾಜಿಕ ಸಾಮರಸ್ಯದ ಸಂದೇಶ ನೀಡಲಾಯಿತು.
ವರದಿ: ಕುಳೇನೂರು ಅರುಣ್ ಕುಮಾರ್




