
ಚಿಕ್ಕಮಗಳೂರು: ಜಿಲ್ಲೆ ಕಳಸ ತಾಲೂಕಿನ ಕೆಳಗೂರು ಗ್ರಾಮದ ಕಾಫಿ ತೋಟದಲ್ಲಿ ಕಾರ್ಮಿಕರ ಮಕ್ಕಳ ಮೇಲೆ ಸಾಕು ನಾಯಿಗಳ ದಾಳಿ ನಡೆದಿದ್ದು, ತೋಟದೊಳಗಿನ ಲೈನ್ ಮನೆಗಳ ಬಳಿ ಇದ್ದ 5-6 ಸಾಕು ನಾಯಿಗಳು 7 ವರ್ಷದ ಮಾಧವ ಎಂಬ ಬಾಲಕನ ಮೇಲೆ ಭೀಕರವಾಗಿ ದಾಳಿ ನಡೆಸಿವೆ. ಬಾಲಕನ ತಲೆ, ಭುಜ ಮತ್ತು ಕುತ್ತಿಗೆ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದು, ನಾಯಿ ದಾಳಿಯಿಂದ ಮಗುವಿನ ಸ್ಥಿತಿ ನೋಡಲಾಗದಂತಾಗಿದೆ. ಕಾಫಿ ಗಿಡದ ಕಸಿಗೆ ಬಂದಿದ್ದ ತಮಿಳುನಾಡಿನ ಈ ಕುಟುಂಬ ಕಳೆದ 4-5 ವರ್ಷಗಳಿಂದ ಇದೇ ತೋಟದಲ್ಲಿ ವಾಸವಿದ್ದು, ಗಾಯಗೊಂಡ ಬಾಲಕನಿಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಗುವಿನ ಸ್ಥಿತಿಯನ್ನು ನೋಡಿ ಕೂಲಿಗೆ ಬಂದ ಪೋಷಕರು ಕಣ್ಣೀರಿಟ್ಟಿದ್ದು, ಈ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





