
ಭಾರತದಲ್ಲಿ ವಿವಿಧ ಕ್ಷೇತ್ರಗಳಿಗೆ ವಿದೇಶೀ ನೇರ ಹೂಡಿಕೆಗಳು ಹರಿದುಬರುವುದು ಮುಂದುವರೆದಿದ್ದು, ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ರಾಜ್ಯ ಸಚಿವರಾದ ಜಿತಿನ್ ಪ್ರಸಾದ್ ಅವರು 2020-21 ರಿಂದ 2025-26 ರವರೆಗೆ ಭಾರತದಲ್ಲಿ ರಾಜ್ಯವಾರು ಎಫ್ಡಿಐ [ Forign Direct Investment ] ಹರಿವಿನ ಮಾಹಿತಿಯನ್ನು ತಿಳಿಸಿದ್ದಾರೆ. ಈ ಮಾಹಿತಿಯ ಪ್ರಕಾರ ಕರ್ನಾಟಕದಲ್ಲಿ ಎಫ್ಡಿಐ ಹರಿವು ಹೆಚ್ಚಾಗಿದ್ದು, ಅತೀಹೆಚ್ಚು ಎಫ್ಡಿಐ ಪಡೆದಿರುವ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿ ಮಹಾರಾಷ್ಟ್ರ ನಂತರ ಎರಡನೇಯ ಸ್ಥಾನದಲ್ಲಿ ಕರ್ನಾಟಕ ಇದೆ. 2025-26ರಲ್ಲಿ ಕರ್ನಾಟಕಕ್ಕೆ 12.94 ಬಿಲಿಯನ್ ಡಾಲರ್ನಷ್ಟು ಅಂದರೇ ಸುಮಾರು 1.25 ಲಕ್ಷ ಕೋಟಿ ರೂ ಎಫ್ಡಿಐ ಬಂದಿದ್ದು, ಹಿಂದಿನ ವರ್ಷದಕ್ಕೆ ಹೋಲಿಸಿದರೆ ಈ ವಿದೇಶೀ ಹೂಡಿಕೆಗಳು ದುಪ್ಪಟ್ಟಾಗಿದ್ದು, ಭಾರತಕ್ಕೆ ಬಂದ ಒಟ್ಟು ಎಫ್ಡಿಐನಲ್ಲಿ ಕರ್ನಾಟಕಕ್ಕೆ ಶೇ. 21.99 ರಷ್ಟು ಸಿಕ್ಕಿದೆ.




