
ನವದೆಹಲಿ: ಇತ್ತೀಚೆಗೆ ಕೆಎಂಎಫ್ ನಂದಿನಿ ಹಾಲಿನ ದರ ಏರಿಕೆಯಾದ ಬೆನ್ನಲ್ಲೇ, ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ (GCMMF) ಅಡಿಯಲ್ಲಿ ಮಾರಾಟವಾಗುವ ಅಮುಲ್ ಬ್ರಾಂಡ್ ಹಾಲಿನ ಬೆಲೆಯನ್ನೂ ಲೀಟರ್ಗೆ 2 ರೂ. ಹೆಚ್ಚಿಸಿದೆ. ಮೇ 14ರಿಂದ ದೇಶಾದ್ಯಂತ ಹೊಸ ದರ ಜಾರಿಗೆ ಬರಲಿದ್ದು, ಅಮುಲ್ ಸ್ಟ್ಯಾಂಡರ್ಡ್, ಅಮುಲ್ ಬಫೆಲೋ, ಅಮುಲ್ ಗೋಲ್ಡ್, ಅಮುಲ್ ಸ್ಲಿಮ್ & ಟ್ರಿಮ್, ಅಮುಲ್ ಚಾಯ್ ಮಜಾ, ಅಮುಲ್ ತಾಜಾ ಹಾಗೂ ಅಮುಲ್ ಕೌ ಮಿಲ್ಕ್ ಸೇರಿದಂತೆ ಹಲವು ಹಾಲಿನ ವಿಧಗಳ ಬೆಲೆ ಏರಿಕೆಗೊಂಡಿದೆ. ಹಾಲಿನ ಉತ್ಪಾದನೆ, ಜಾನುವಾರು ಮೇವು, ಪ್ಯಾಕೇಜಿಂಗ್ ಫಿಲ್ಮ್ ಹಾಗೂ ಇಂಧನ ವೆಚ್ಚಗಳು ಹೆಚ್ಚಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು GCMMF ತಿಳಿಸಿದೆ. ಈ ದರ ಏರಿಕೆಯಿಂದ ಆಹಾರ ಹಣದುಬ್ಬರ ಹೆಚ್ಚಾಗುವ ಸಾಧ್ಯತೆ ಇದ್ದು, ಮಧ್ಯಮ ವರ್ಗದ ಗ್ರಾಹಕರ ಮನೆ ಬಜೆಟ್ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಹೊಸ ಬೆಲೆಗೆ ಅನುಸಾರವಾಗಿ ಅಮುಲ್ ತಾಜಾ 500 ಮಿಲಿ ಪ್ಯಾಕ್ಗೆ 29 ರೂ. ಮತ್ತು 1 ಲೀಟರ್ಗೆ 57 ರೂ., ಅಮುಲ್ ಗೋಲ್ಡ್ 500 ಮಿಲಿ ಬೆಲೆ 35 ರೂ. ಹೆಚ್ಚುವರಿಯಾಗಿ, ಅಮುಲ್ ಶಕ್ತಿ 500 ಮಿಲಿ 32 ರೂ.ಗೆ ಲಭ್ಯವಿರುತ್ತದೆ, 1 ಲೀಟರ್ ಅಮುಲ್ ಟೀ ಸ್ಪೆಷಲ್ ಪ್ಯಾಕ್ ರೂ. 66 ಕ್ಕೆ ಹೆಚ್ಚಾಗಲಿದೆ ಮತ್ತು 500 ಮಿಲಿ ಎಮ್ಮೆ ಹಾಲು ರೂ. 39 ಕ್ಕೆ ಪರಿಷ್ಕರಿಸಲಾಗಿದೆ.





