
ಮೈಸೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಜಂಟಿಯಾಗಿ ಗ್ರಾಮೀಣ ಪುನರ್ವಸತಿ ಯೋಜನೆಯಡಿ ನಗರ ಪುನರ್ವಸತಿ ಕಾರ್ಯಕರ್ತರ (Urban Rehabilitation Worker) ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು, ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಲಯ ಕಚೇರಿ–01 ಮತ್ತು ವಲಯ ಕಚೇರಿ–07ರಲ್ಲಿ ಖಾಲಿ ಇರುವ ಹುದ್ದೆಗಳನ್ನು ಗೌರವಧನ ಆಧಾರದ ಮೇಲೆ ಭರ್ತಿ ಮಾಡಲಾಗುತ್ತಿದೆ. ಈ ಯೋಜನೆಯಡಿ ಕ್ಷೇತ್ರ ಮಟ್ಟದಲ್ಲಿ ಪಿಂಚಣಿ, UDID ಕಾರ್ಡ್, ತರಬೇತಿ, ಉದ್ಯೋಗ ಸೌಲಭ್ಯಗಳು ಹಾಗೂ ವಿವಿಧ ಸರ್ಕಾರಿ ಕಲ್ಯಾಣ ಯೋಜನೆಗಳು ವಿಕಲಚೇತನರು ಮತ್ತು ಹಿರಿಯ ನಾಗರಿಕರಿಗೆ ತಲುಪಿಸುವುದು ಉದ್ದೇಶವಾಗಿದ್ದು, ಆಯ್ಕೆಯಾದ ಕಾರ್ಯಕರ್ತರು ಮನೆ ಮನೆ ಭೇಟಿ, ಜಾಗೃತಿ ಕಾರ್ಯಗಳು, ಅರ್ಜಿ ಸಹಾಯ ಹಾಗೂ ದಾಖಲೆ ಮತ್ತು ಮೇಲ್ವಿಚಾರಣಾ ಕೆಲಸಗಳನ್ನು ನಿರ್ವಹಿಸಲಿದ್ದಾರೆ. SSLC ಅಂಕಪಟ್ಟಿ, ವಯಸ್ಸು ಪುರಾವೆ (ಆಧಾರ್/ಶಾಲಾ ಪ್ರಮಾಣಪತ್ರ), ವಿಕಲಚೇತನ ಪ್ರಮಾಣಪತ್ರ (UDID), ಆಧಾರ್ ಕಾರ್ಡ್, 3 ಪಾಸ್ಪೋರ್ಟ್ ಸೈಜ್ ಫೋಟೋ, ವಾಸ್ತವ್ಯ ದೃಢೀಕರಣ ಮತ್ತು ಬ್ಯಾಂಕ್ ಖಾತೆ ವಿವರ ಕಡ್ಡಾಯವಾಗಿದ್ದು, ಅರ್ಜಿ ನಮೂನೆಯನ್ನು ಮೇ 8 ರಿಂದ ಮೇ 22ರ ನಡುವೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ, ಪುಲಿಕೇಶಿ ರಸ್ತೆ, ತಿಲಕ್ನಗರ, ಮೈಸೂರಿನಿಂದ ಪಡೆಯಬಹುದಾಗಿದ್ದು, ಭರ್ತಿ ಮಾಡಿದ ಅರ್ಜಿಯನ್ನು ಮೇ 25, 2026 ಸಂಜೆ 5 ಗಂಟೆಯೊಳಗೆ ಸಲ್ಲಿಸಬೇಕು. ಆಯ್ಕೆ ಪ್ರಕ್ರಿಯೆಯಲ್ಲಿ ಅರ್ಜಿ ಪರಿಶೀಲನೆ ಹಾಗೂ ಸಂದರ್ಶನ ಅಥವಾ ಯೋಗ್ಯತಾ ಪರೀಕ್ಷೆ ನಡೆಯಲಿದ್ದು, ಆಯ್ಕೆಯಾದವರಿಗೆ ತರಬೇತಿ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಹಾಗೂ ಹೆಚ್ಚಿನ ಮಾಹಿತಿಗೆ 0821-2490333 ಸಂಪರ್ಕಿಸಲು ಸೂಚಿಸಲಾಗಿದೆ.







