ನಕಲಿ ದಾಖಲೆ ಸೃಷ್ಠಿಸಿ ಅರಣ್ಯ-ಕಂದಾಯ ಭೂಮಿ ಕಬಳಿಕೆ ಯತ್ನ
ಚಿಕ್ಕಮಗಳೂರು: ಮರೇಬೈಲ್ ಗ್ರಾಮದ ಮನ್ಮಥ (ನೇಮಣ್ಣಗೌಡ) ಎಂಬಾತನನ್ನು ಮೂಡಿಗೆರೆ ಪೊಲೀಸರು ಬಂಧಿಸಿದ್ದಾರೆ. ತನಿಖೆಯ ವೇಳೆ ನಕಲಿ ನಕ್ಷೆಗಳು ಮತ್ತು ಗ್ರಾಮ ಲೆಕ್ಕಾಧಿಕಾರಿಯವರ ನಕಲಿ ಸಹಿಯನ್ನು ಬಳಸಿ ಸುಮಾರು ೫೦೦ ಎಕರೆಗೂ ಅಧಿಕ ಜಮೀನು ತನ್ನ ಪೂರ್ವಜರಾದ ಈರೇಗೌಡ ಎಂಬುವವರ ಹೆಸರಿಗೆ ವರ್ಗಾವಣೆಯಾಗಿದೆ ಎಂಬ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದು ಮೇಲ್ನೋಟಕ್ಕೆ ದೃಢಪಟ್ಟಿದೆ. ಉಪವಿಭಾಗಾಧಿಕಾರಿಗಳ ಸೂಚನೆಯ ಮೇರೆಗೆ ಮೂಡಿಗೆರೆ ತಹಶೀಲ್ದಾರ್ ಅವರು ನೀಡಿದ ದೂರಿನ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ.
