ಬೆಳಗಾವಿ: ಚಳಿಗಾಲದ ಅಧಿವೇಶನದಲ್ಲಿ ಜೆಡಿಎಸ್ನ ವಿವೇಕಾನಂದ ಅವರು ಕೇಳಿದ ಪ್ರಶ್ನೆಗೆಉತ್ತರಿಸಿದ ಮದುಬಂಗಾರಪ್ಪ ಅವರು ರಾಜ್ಯದಲ್ಲಿನ ೧೬೦೦ಕ್ಕೂ ಅಧಿಕ ಸರ್ಕಾರಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಕಟ್ಟಡಗಳು ಅದೇ ಶಾಲಾ ಕಾಲೇಜಿನ ಹೆಸರಿಗೆ ಖಾತೆ ಇನ್ನೂ ಆಗಿಲ್ಲ. ಸರ್ಕಾರಿ ಶಾಲಾ ಆಸ್ತಿಗಳ ಸಂರಕ್ಷಣೆಗಾಗಿ ಕಂದಾಯ ಗ್ರಾಮೀಣಾಭಿವೃದ್ಧಿ, ಪೌರಾಡಳಿತ ಇಲಾಖೆಗಳ ಸಹಯೋಗದಲ್ಲಿ ಪ್ರತಿ ವರ್ಷ ಶಾಲಾ-ಕಾಲೇಜು ಆಸ್ತಿ ಸಂರಕ್ಷಣಾ ಆಂದೋಲನಾ ನಡೆಸಲಾಗಿತ್ತು. ಇದರ ಪ್ರಕಾರ ಶಾಲಾ-ಕಾಲೇಜಿಗೆ ಸೇರಿದ ಆಸ್ತಿ ಖಾತೆಯು ಆಯಾ ಶಾಲಾ-ಕಾಲೇಜುಗಳ ಹೆಸರಿನಲ್ಲಿ ನೊಂದಣಿಯಾಗಬೇಕೆಂಬ ಆದೇಶ ಹೊರಡಿಸಿತ್ತು. ಅದರಲ್ಲಿ ಇನ್ನೂ ಬಾಕಿಯಿರುವ ಎಲ್ಲಾ ಆಸ್ತಿಯನ್ನು ಹಂತ ಹಂತವಾಗಿ ಖಾತೆ ಮಾಡಲು ಕ್ರಮ ವಹಿಸಲಾಗುತ್ತದೆ ಎಂದು ವಿಧಾನಪರಿಷತ್ನಲ್ಲಿ ಕೇಳಿದ ಪ್ರಶ್ನೆಗೆ ಶಾಲಾ ಶಿಕ್ಷಣಾ ಸಚಿವ ಮಧುಬಂಗಾರಪ್ಪ ಅವರು ಮಾಹಿತ ನೀಡಿದರು.
