
ಚಾಮರಾಜನಗರ: ಸ್ನೇಹ ಮಾನವ ಜೀವನದ ವೈಶಿಷ್ಟ್ಯ, ಸ್ನೇಹ ಮಧುರ, ಸಂತೋಷ, ಪ್ರೀತಿ, ಆನಂದ, ಸುಖ ದುಃಖಗಳ ಮಿಶ್ರಣವಾಗಿದ್ದು, ಸ್ನೇಹವನ್ನು ಸದಾ ಕಾಲ ಬೆಳೆಸಿಕೊಳ್ಳಲು ಪ್ರಯತ್ನಿಸಿ, ಸ್ನೇಹ ಅಮರ ಮತ್ತು ಶಾಶ್ವತವಾದದ್ದು. ಸಣ್ಣ ಸಣ್ಣ ವಿಷಯಗಳಿಗೂ ಸ್ನೇಹವನ್ನು ಕಳೆದುಕೊಳ್ಳುವ ಗುಣ ಬೆಳೆಸಿಕೊಳ್ಳಬಾರದು ಎಂದು ಸಂಸ್ಕೃತಿ ಚಿಂತಕ ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದ್ದ್ದು, ಅವರು ಜೈ ಹಿಂದ್ ಪ್ರತಿಷ್ಠಾನ ಋಗ್ವೇದಿ ಯೂತ್ ಕ್ಲಬ್ ಯುವಶಕ್ತಿ ಪರಿಷತ್ ವತಿಯಿಂದ ಶ್ರೀ ಭುವನೇಶ್ವರಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಸ್ನೇಹಿತರ ದಿನ ಕಾರ್ಯಕ್ರಮದಲ್ಲಿ ಸಿಹಿ ಹಂಚಿ ಮಾತನಾಡುತ್ತ ಪ್ರತಿ ವರ್ಷ ಜುಲೈ 30 ರಂದು ಅಂತರಾಷ್ಟ್ರೀಯ ಸ್ನೇಹ ದಿನವನ್ನಾಗಿ ಇಡೀ ಜಗತ್ತಿನಲ್ಲಿ ನಡೆಸಲಾಗುತ್ತಿದೆ. ಇಂದಿನ ಯುವ ಸಮೂಹ ಮತ್ತು ವಿದ್ಯಾರ್ಥಿ ಸಮೂಹ ಜಗತ್ತಿನ ಎಲ್ಲೆಡೆ ವಿಸ್ತಾರವಾಗಿ ಬೆಳೆದಿದ್ದು ತಮ್ಮ ವೃತ್ತಿ ಮತ್ತು ಅಧ್ಯಯನ, ಸಂಸ್ಕೃತಿ ಪರಂಪರೆಯ ಚಿಂತನೆಗಾಗಿ ಜಗತ್ತಿನಲ್ಲೇ ಹರಡಿಕೊಂಡಿದ್ದು, ವಿಶ್ವಭ್ರಾತತ್ವದ ಚಿಂತನೆಯ ಜೊತೆಗೆ ಭಾರತದ ವಸುದೈವ ಕುಟುಂಬಕಂ ಚಿಂತನೆಯ ಸಾರವಾಗಿ ಇಡೀ ಜಗತ್ತಿನಲ್ಲಿ ಭಾರತೀಯರು ಸರ್ವ ಸ್ನೇಹ ಜೀವನವನ್ನು ನಡೆಸುತ್ತಿದ್ದಾರೆ. ಪ್ರತಿಯೊಬ್ಬರಿಗೂ ಜೀವನದಲ್ಲಿ ಕುಟುಂಬ, ತಂದೆ-ತಾಯಿ, ನಂತರ ಅತ್ಯಂತ ಪವಿತ್ರವಾದ ಸ್ನೇಹ ಎಲ್ಲಾ ಕಡೆ ಬೆಳೆಸಿಕೊಂಡು ಮನುಷ್ಯ ಜೀವನವನ್ನು ಸುಖ, ಸಂತೋಷ, ಆನಂದದಿಂದ ಮತ್ತು ಪರಸ್ಪರ ಸುಖ-ದುಃಖಗಳನ್ನು ಹಂಚಿಕೊಳ್ಳುವ ಮೂಲಕ ಮನಸ್ಸನ್ನು ನಿರಾಳವಾಗಿ ಮಾಡಿಕೊಳ್ಳಲು ಸ್ನೇಹ ಬಹಳ ಮುಖ್ಯವಾದದ್ದು, ಸ್ನೇಹಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಸ್ನೇಹಕ್ಕೆ ಮಹತ್ವ ನೀಡಿ ಎಂದು ತಿಳಿಸಿದರು. ಯುವಶಕ್ತಿ ಪರಿಷತ್ತಿನ ಅಧ್ಯಕ್ಷರಾದ ಎಲ್ ಸುರೇಶ್ ಮಾತನಾಡಿ ಚಾಮರಾಜನಗರದ ಯುವ ಸ್ನೇಹಿತರು ಒಂದೆಡೆ ಸೇರಿ ವಿಶ್ವ ಸ್ನೇಹಿತರ ದಿನವನ್ನು ಆಚರಿಸುತ್ತಿರುವುದು ಸಂತೋಷವಾಗಿದ್ದು, ಮಾನವ ಪ್ರತಿ ಹಂತದಲ್ಲೂ ಸ್ನೇಹಕ್ಕೆ ಮಹತ್ವವನ್ನು ನೀಡಿ ಜೀವನವನ್ನು ಸರಳ ಹಾಗೂ ಸುಂದರವಾಗಿ ರೂಪಿಸಿಕೊಳ್ಳಬೇಕು. ಹಣ, ಅಧಿಕಾರ, ಬಡತನ, ಸಿರಿತನ, ದೊಡ್ಡವರು, ಚಿಕ್ಕವರು ಎನ್ನುವುದು ಮುಖ್ಯವಲ್ಲ ಸ್ನೇಹಕ್ಕೆ ಆತ್ಮೀಯತೆ ಬಹಳ ಮುಖ್ಯ. ಪ್ರತಿಯೊಬ್ಬರಲ್ಲೂ ಪ್ರೀತಿ, ಪ್ರೇಮ, ವಿಶ್ವಾಸ, ಏಕತೆ ಭಾವೈಕ್ಯತೆಯನ್ನು ಬೆಳೆಸಿಕೊಳ್ಳುವ ಮೂಲಕ ಸುಂದರ ಬದುಕನ್ನು ರೂಪಿಸಿಕೊಳ್ಳೋಣ, ವಿಶ್ವ ಸ್ನೇಹಿತರ ದಿನ ಸರ್ವರಿಗೂ ಒಳಿತನ್ನು ಮಾಡಲಿ ಎಂದು ತಿಳಿಸಿದರು. ಸ್ನೇಹಿತರೆಲ್ಲರಿಗೂ ಸಿಹಿ ವಿತರಿಸಿ ಶುಭಕೋರಿ ಪರಸ್ಪರ ಬಾಲ್ಯ ಜೀವನವನ್ನು ಮೆಲಕು ಹಾಕಿದ್ದ್ದು, ಕಾರ್ಯಕ್ರಮದಲ್ಲಿ ತಿಂಡಿ ಮನೆಯ ಪ್ರಕಾಶ್, ಮಾದೇಶ್, ಕೆನರಾ ಬ್ಯಾಂಕ್ ಪಿಗ್ಮಿ ಮುರುಗೇಶ್, ಸಂಜಯ ಹಾಗೂ ಸಹೋದರಿಯರು ಕೂಡ ಇದ್ದರು.




