
ಕೊಟ್ಟಿಗೆಹಾರ: ಬಸವ ಜಯಂತಿಯಂದು ಕೊಟ್ಟಿಗೆಹಾರ ಸಮೀಪದ ಮೂಡಿಗೆರೆ ತಾಲೂಕಿನ ಅತ್ತಿಗೆರೆ ಬಳಿ ಇರುವ ಸೋಮೇಶ್ವರ ದೇವಸ್ಥಾನದಲ್ಲಿ ಅಪರೂಪದ ದೃಶ್ಯ ಗಮನಸೆಳೆಯಿತು. ದೇವಸ್ಥಾನದಲ್ಲಿ ಪೂಜೆ ನಡೆಯುತ್ತಿದ್ದ ವೇಳೆ ಗಂಟೆ ಶಬ್ದ ಕೇಳುತ್ತಿದ್ದಂತೆ ಒಂದು ಬಸವ (ಎತ್ತು) ದೇವಾಲಯದೊಳಗೆ ಬಂದು ಶಾಂತವಾಗಿ ಪೂಜೆಯನ್ನು ಗಮನಿಸುತ್ತಾ ನಿಂತಿದ್ದು, ಬಳಿಕ ಅರ್ಚಕರು ಬಸವನಿಗೆ ತೀರ್ಥ ಮತ್ತು ಪ್ರಸಾದ ನೀಡಿದಾಗ ಅದನ್ನು ಸ್ವೀಕರಿಸಿ ಕೆಲಕಾಲ ದೇವಸ್ಥಾನದಲ್ಲೇ ಉಳಿದುಕೊಂಡಿತು. ಸ್ಥಳೀಯರ ಪ್ರಕಾರ ಈ ಬಸವ ಪ್ರತಿದಿನವೂ ಪೂಜೆ ಸಮಯದಲ್ಲಿ ದೇವಸ್ಥಾನಕ್ಕೆ ಬರುತ್ತದೆ ಎಂಬುದು ತಿಳಿದುಬಂದಿದ್ದು, ಬಸವ ಜಯಂತಿಯ ದಿನವೇ ಈ ಘಟನೆ ನಡೆದಿರುವುದು ಭಕ್ತರಲ್ಲಿ ವಿಶೇಷ ಭಾವನೆ ಮೂಡಿಸಿತು. ದೇವಸ್ಥಾನಕ್ಕೆ ಬಂದ ಭಕ್ತರು ಬಸವನನ್ನು ದೈವ ಸಂಕೇತವೆಂದು ಭಾವಿಸಿ ಆಶೀರ್ವಾದ ಪಡೆದರು ಮತ್ತು ಪೂಜೆ ಮುಗಿಯುವವರೆಗೂ ದೇವಸ್ಥಾನದಲ್ಲೇ ಇದ್ದ ಬಸವ ನಂತರ ತೀರ್ಥ-ಪ್ರಸಾದ ಸ್ವೀಕರಿಸಿ ಶಾಂತವಾಗಿ ಅಲ್ಲಿಂದ ತೆರಳಿತು, ಈ ದೃಶ್ಯವನ್ನು ಕಂಡ ಭಕ್ತರಲ್ಲಿ ಭಕ್ತಿ ಮತ್ತು ಆಶ್ಚರ್ಯದ ಮಿಶ್ರ ಭಾವನೆ ವ್ಯಕ್ತವಾಯಿತು.




