ಚಿಕ್ಕಮಗಳೂರು: ಹಣದ ಲಾಲಸೆಗೆ ತಂದೆಯೇ ಅಪ್ರಾಪ್ತ ಮಗಳನ್ನು ವೇಶ್ಯಾವಾಟಿಕೆಗೆ ನೂಕಲು ಯತ್ನಿಸಿದ ಅಮಾನವೀಯ ಘಟನೆ ಕಡೂರು ತಾಲ್ಲೂಕಿನ ಬೀರೂರಿನಲ್ಲಿ ಬೆಳಕಿಗೆ ಬಂದಿದೆ. ತಾಯಿ ಇಲ್ಲದ 16 ವರ್ಷದ ಬಾಲಕಿಯನ್ನು ತಂದೆ ಗಿರೀಶ್ ಹಾಗೂ ಅಜ್ಜಿ ನಾಗರತ್ನ ಹಣಕ್ಕಾಗಿ ಬಳಸಿಕೊಂಡು, ಭರತ್ ಶೆಟ್ಟಿ ಎಂಬ ವ್ಯಕ್ತಿಯೊಂದಿಗೆ ಮಂಗಳೂರಿಗೆ ಕರೆದೊಯ್ದು ಆರು ದಿನಗಳ ಕಾಲ ದುರುಪಯೋಗಪಡಿಸಿಕೊಂಡ ಆರೋಪ ಕೇಳಿಬಂದಿದೆ. ಊರಿಗೆ ಮರಳಿದ ಬಳಿಕ ನೊಂದ ಬಾಲಕಿ ಈ ವಿಷಯವನ್ನು ತನ್ನ ಚಿಕ್ಕಪ್ಪ ಮತ್ತು ಅತ್ತೆಗೆ ತಿಳಿಸಿದ್ದು, ಅವರ ಮೂಲಕ ಬೀರೂರು ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ. ದೂರು ಆಧರಿಸಿ ಪೊಲೀಸರು ಗಿರೀಶ್, ನಾಗರತ್ನ ಹಾಗೂ ಭರತ್ ಶೆಟ್ಟಿ ಸೇರಿದಂತೆ ಪ್ರಮುಖ ಆರೋಪಿಗಳನ್ನು ಬಂಧಿಸಿ, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
