
ಚಿಕ್ಕಮಗಳೂರು: ದಿನದಿಂದ ದಿನಕ್ಕೆ ಮದ್ಯವರ್ತಿಗಳ ಹಾವಳಿ ಮಿತಿಮೀರಿದ್ದು ಇದೀಗ ರೈತರು ಪರದಾಡುವಂತಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕೆಸವಿನ ಮನೆ ಗ್ರಾಮದ ಕೋಳಿ ಫಾರ್ಮ್ ಒಂದರಲ್ಲಿ ಮದ್ಯವರ್ತಿಗಳು ಕೈಗಾರಿಕಾ ಉದ್ದೇಶಕ್ಕೆ ಯೂರಿಯಾ ಚೀಲಗಳನ್ನು ರಿಪ್ಯಾಕಿಂಗ್ ಮಾಡುವ ಸಲುವಾಗಿ, ಗೊಬ್ಬರವನ್ನು ಅಕ್ರಮವಾಗಿ ಸ್ಟಾಕ್ ಮಾಡಿದ್ದು, ಇತ್ತ ರೈತರು ಯೂರಿಯಾ ಗೊಬ್ಬರಕ್ಕಾಗಿ ಪರದಾಡುತ್ತಿದ್ದಾರೆ. ವಿಷಯ ತಿಳಿದು ಕೃಷಿ ಇಲಾಖೆ ಅಧಿಕಾರಿ ತಿರುಮಲೇಶ್ ಅವರ ನೇತೃತ್ವದಲ್ಲಿ ಕೋಳಿ ಫಾರ್ಮ್ ಮೇಲೆ ದಾಳಿ ನಡೆಸಿದ್ದು ೧೮೧ ಚೀಲಾ ಯೂರಿಯ, ೨೧೮ ರಿ ಮಾಡಿದ ಯೂರಿಯ ಗೊಬ್ಬರದ ಚೀಲಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಆರೋಪಿ ಕೋಳಿಫಾರಂ ಮಾಲೀಕ ರಾಜೇಶ್ ಮೇಲೆ ಚಿಕ್ಕಮಗಳೂರು ಗ್ರಾಮಾಂತರ ಪೋಲಿಸರ ಪ್ರಕರಣ ದಾಖಲಿಸಿದ್ದಾರೆ.





