
ಧರ್ಮಸ್ಥಳದಿಂದ ಆಂಧ್ರ ಪ್ರದೇಶದತ್ತ ಸಾಗುತ್ತಿದ್ದ ಬಸ್ ಚಾರ್ಮಾಡಿ ಘಾಟ್ನ ನಾಲ್ಕನೇ ತಿರುವಿನಲ್ಲಿ ಪಲ್ಟಿಯಾಗಿದ್ದು, ಸುಮಾರು 20 ಜನರು ಗಾಯಗೊಂಡ ಘಟನೆ ನಡೆದಿದೆ. ಪ್ರಯಾಣಿಸುತ್ತಿದ್ದವರು ಎಲ್ಲರೂ ಆಂಧ್ರ ಮೂಲದವರಾಗಿದ್ದಾರೆ ಎಂದು ತಿಳಿದುಬಂದಿದೆ. ತಕ್ಷಣ ಗಾಯಾಳುಗಳನ್ನು 5–6 ಆಂಬುಲೆನ್ಸ್ಗಳ ಮೂಲಕ ಕಕ್ಕಿಂಜೆ ಕೃಷ್ಣ ಆಸ್ಪತ್ರೆ ಹಾಗೂ ಬೆಳ್ತಂಗಡಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಅವರ ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.




