
ಶೃಂಗೇರಿ: 2026_2027 ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಜ್ಞಾನಭಾರತಿ ವಿದ್ಯಾ ಕೇಂದ್ರ ನೂರಕ್ಕೆ ನೂರು ಫಲಿತಾಂಶ ಪಡೆದಿದ್ದು ಪರೀಕ್ಷೆಗೆ ಹಾಜರಾದ 62 ವಿದ್ಯಾರ್ಥಿಗಳಲ್ಲಿ 31 ವಿದ್ಯಾರ್ಥಿಗಳು A+ ಶ್ರೇಣಿಯಲ್ಲಿ 24 ವಿದ್ಯಾರ್ಥಿಗಳು A ಶ್ರೇಣಿಯಲ್ಲಿ7 ವಿದ್ಯಾರ್ಥಿಗಳುB+ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು ಇವರಲ್ಲಿ ಕುಮಾರಿ ನವಮಿ 615 ಅಂಕಗಳನ್ನು ಗಳಿಸಿ ತಾಲೂಕಿಗೆ ಎರಡನೇ ಸ್ಥಾನ ವನ್ನು ಪಡೆದಿರುತ್ತಾಳೆ ಉಳಿದಂತೆ ಧ್ರುವ ತೇಜ 612, ನಮಿತಾ 610, ಮನಸ್ವಿ 608, ನೇಸರ್ 608, ಶ್ರೀಕರ 606, ಶ್ರೇಯಸ್ 606, ಅಪೂರ್ವ 604, ಅಥರ್ವ ಧ್ಯಾನ್ 604, ಐಶ್ವರ್ಯ 603, ಅನಂತಮೂರ್ತಿ 603, ನಾರಾಯಣ 603, ಶ್ರೀಪ್ರಿಯ 603, ನಿಶಾ 601, ದಿಶಾ 599 ಅಂಕಗಳನ್ನು ಗಳಿಸಿ ಶಾಲೆಗೆ ಕೀರ್ತಿಯನ್ನು ಇಮ್ಮಡಿಗೊಳಿಸಿರುತ್ತಾರೆ. ಇವರನ್ನು ಶಾಲೆಯ ಆಡಳಿತ ಮಂಡಳಿ ಮುಖ್ಯೋಪಾಧ್ಯಾಯರು ಶಿಕ್ಷಕ ವೃಂದ ಬೋಧಕೇತರವೃಂದ ಅಭಿನಂದಿಸಿರುತ್ತಾರೆ




