ಜ್ಞಾನಭಾರತಿ ಟ್ರಸ್ಟ್ ವತಿಯಿಂದ ಶೃಂಗೇರಿಯಲ್ಲಿ ತಾಲ್ಲೂಕು ಮಟ್ಟದ 1 ರಿಂದ 10ನೇ ವಿದ್ಯಾರ್ಥಿಗಳಿಗೆ ಗಾಳಿಪಟ ಹಾರಿಸುವ ಸ್ಪರ್ದೆಯನ್ನು ಆಯೋಜಿಸಲಾಗಿದ್ದು, ಮಕ್ಕಳಲ್ಲಿ ಸೃಜನಶೀಲತೆ, ಪರಂಪರೆ ಮತ್ತು ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ವಿಶೇಷ ಸ್ಪರ್ಧೆಯನ್ನು ಹಮ್ಮಿಕೊಳಲಾಗಿದೆ. ಹೆಲಿಪ್ಯಾಡ್ ಮೈದಾನದಲ್ಲಿ ದಿನಾಂಕ 17-01-2026 ಶನಿವಾರ ಸಂಜೆ 4 ಗಂಟೆಗೆ ನಡೆಯಲಿದ್ದು, 30 ನಿಮಿಷದ ಕಾಲಾವಕಾಶದಲ್ಲಿ ಗಾಳಿಪಟವನ್ನು ಹಾರಿಸಬೇಕು. ಗಾಳಿಪಟವನ್ನು ವಿದ್ಯಾರ್ಥಿಗಳೇ ತರತಕ್ಕದ್ದು ಎಂದು ಸೂಚಿಸಲಾಗಿದೆ. ಈ ಸ್ಪರ್ಧೆಗೆ 50ರೂ ಪ್ರವೇಶ ಶುಲ್ಕವಿದ್ದು, ಆಸಕ್ತ ವಿದ್ಯಾರ್ಥಿಗಳು ತಮ್ಮ ಹೆಸರನ್ನು 16-01-2026ರ ಒಳಗೆ ನೋಂದಾಯಿಸತಕ್ಕದ್ದು, ಹೆಚ್ಚಿನ ಮಾಹಿತಿಗಾಗಿ ಸಂರ್ಪಕಿಸಿ 9482948549. ತಾಲ್ಲೂಕಿನ ಎಲ್ಲಾ ಶಾಲಾ ವಿದ್ಯಾರ್ಥಿಗಳಿಗೂ ಮುಕ್ತ ಪ್ರವೇಶವಿದ್ದು, ಈ ವಿಶಷ್ಟ ಸ್ಪರ್ಧೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಜ್ಞಾನಭಾರತಿ ಟ್ರಸ್ಟ್ನ ಪದಾಧಿಕಾರಿಗಳು ಕೋರಿದ್ದಾರೆ.
