ಬೆಂಗಳೂರು: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಫೆಡರೇಷನ್ ತನ್ನ ನಂದಿನಿ ಬೂತ್ಗಳಲ್ಲಿ ಕೇವಲ ನಂದಿನಿ ಉತ್ಪನ್ನಗಳನ್ನೇ ಮಾರಾಟ ಮಾಡಬೇಕೆಂದು ಹೊಸ ನಿಯಮ ಜಾರಿಗೊಳಿಸಿದೆ. ಹಲವು ಬೂತ್ಗಳಲ್ಲಿ ನಂದಿನಿಯ ಜೊತೆಗೆ ಬೇರೆ ಬ್ರಾಂಡ್ಗಳ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದ ಹಿನ್ನಲೆಯಲ್ಲಿ ಕೆ.ಎಂ.ಎಫ್ ಸಂಬಂಧಿತ ಮಳಿಗೆ ಮಾಲೀಕರಿಗೆ ನೋಟಿಸ್ ನೀಡಿದ್ದು, ಆದೇಶ ಉಲ್ಲಂಘಿಸಿದರೆ ಪರವಾನಗಿ ರದ್ದು ಮಾಡುವ ಎಚ್ಚರಿಕೆ ನೀಡಿದೆ. ನಂದಿನಿ ತುಪ್ಪ ಸೇರಿದಂತೆ ಹಾಲು ಉತ್ಪನ್ನಗಳು ದೇಶ-ವಿದೇಶಗಳಲ್ಲಿ ಹೆಸರಾಗಿರುವ ಸಂದರ್ಭದಲ್ಲಿ ಬ್ರಾಂಡ್ ಶುದ್ಧತೆಯನ್ನು ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಬೂತ್ಗಳ ಬಾಡಿಗೆ ಹೆಚ್ಚಿರುವ ಕಾರಣದಿಂದ ಬೇರೆ ಉತ್ಪನ್ನಗಳನ್ನೂ ಮಾರುತಿದ್ದೇವೆ ಎಂದು ಮಾರಾಟಗಾರರು ಸ್ಪಷ್ಟಪಡಿಸಿದರೂ, ಈಗಿನಿಂದ ನಿಯಮ ಪಾಲನೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
