
ಭಾರತದ ಉದ್ದಗಲಕ್ಕೂ ನಡೆಯುತ್ತಿರುವ ಹೋರಾಟಗಳೆ ಈ ದಶಕದ ಅತಿ ದೊಡ್ಡ ಸುದ್ದಿ. ಮೇಲಾಗಿ ನಮ್ಮ ದೇಶದ ಯಾವುದೇ ಸಮಸ್ಯೆಗಳು ಪ್ರತಿಭಟನೆ ಧರಣಿ ಮುಷ್ಕರ ಗಳಿಲ್ಲದೆ ಪರಿಹಾರ ಮರೀಚಿಕೆಯಾಗಿ ಉಳಿಯುತ್ತದೆ. ಆದ್ದರಿಂದ ಪ್ರಸ್ತುತ ಪ್ರತಿಭಟನೆಗಳು ಧರಣಿಗಳು ಸತ್ಯಾಗ್ರಹಗಳು ಬಹಳ ಪ್ರಾಮುಖ್ಯತೆಯನ್ನು ಪಡೆಯುತ್ತವೆ . ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿ ಭಾರತಕ್ಕೆ ಕಾನೂನು ಮತ್ತು ಸುವ್ಯವಸ್ಥೆಗಳ ಅಡಿಯಲ್ಲಿ ಆರ್ಥಿಕ ನಷ್ಟವನ್ನು ತಂದೊ ಡ್ಡುತ್ತವೆಯಾದರೂ ಅನಿವಾರ್ಯ ಎಂಬಂತೆ ನಡೆಸಲಾಗುತ್ತದೆ. ಮತ್ತು ನಡೆಯುತ್ತಿವೆ. ಹೋರಾಟ ಮುಷ್ಕರ ನಡೆಸುವ ಸ್ಥಳ ಆಯ್ಕೆ ಮಾಡಿ ನಿಗದಿ ಮಾಡುತ್ತಿರುವ ಆಡಳಿತವು ನಾಡಿನ ಕಾನೂನು ಸುವ್ಯವಸ್ಥೆ , ವಾಹನ ಸಂಚಾರ ಸಾರ್ವಜನಿಕ ವ್ಯವಹಾರಗಳಿಗೆ ಅಡಚಣೆಯ ಕಾರಣಗಳನ್ನು ನೀಡಿದರೆ ಈ ಕ್ರಮವು ಪ್ರತಿಭಟನೆಕಾರರ ಆಶಯಗಳ ನಡುವೆ ತೀವ್ರ ಸಂಘರ್ಷಕ್ಕೂ ಕಾರಣವಾಗುತ್ತದೆ.
ಅನೇಕ ವರ್ಷಗಳಿಂದ ದೆಹಲಿಯ ಜಂತರ್ ಮಂಥರ್ ಪ್ರದೇಶವು ಈ ಮುಷ್ಕರಗಳಿಗೆ ಕೇಂದ್ರ ಸ್ಥಳವಾಗಿ ಗುರುತಿಸಲ್ಪಟ್ಟಿತ್ತು. 1993 ರಿಂದಲೂ ರಾಷ್ಟ್ರೀಯ ಮತ್ತು ಸ್ಥಳೀಯ ಸಮಸ್ಯೆಗಳಿಗೆ ವಿವಿಧ ವರ್ಗಗಳ ನಾಗರೀಕ ಪ್ರತಿಭಟನೆಗಳಿಗೆ ಈ ಪ್ರದೇಶ ಸಾಕ್ಷಿಯಾಗಿ ನಿಂತಿತ್ತು. ನ್ಯಾಯ ಅನ್ಯಾಯ ಸರಿ ತಪ್ಪುಗಳ ಕುರಿತ ಧ್ವನಿ ಒಂದು ಆಳ್ವಿಕೆ ವರ್ಗಕ್ಕೆ ಜಾಗೃತಿ ಮೂಡಿಸುವ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ಭಾರತೀಯ ಆಶಯಗಳಿಗೆ ಜಂತರ್ ಮಂಥರ್ ಅಭಿವ್ಯಕ್ತಿಯ ಕೇಂದ್ರವಾಗಿತ್ತು . ಪ್ರಜಾಪ್ರಭುತ್ವದ ಅಭಿವ್ಯಕ್ತಿಯ ವೇದಿಕೆಯಾಗಿತ್ತು. ಮಾತ್ರವಲ್ಲ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾತರಿಪಡಿಸುವ ಸಂವಿಧಾನದ 19 ನೇ ವಿಧಿಗೆ ಸ್ವರೂಪ ಮತ್ತು ಗುರುತನ್ನು ನೀಡುವ ಮುಖ್ಯ ಸ್ಥಳ ವಿದಾ ಗಿತ್ತು.
2020 ರಲ್ಲಿ ದೆಹಲಿ ಚಲೋ ಹಮ್ಮಿಕೊಂಡ ರಾಷ್ಟ್ರ ವ್ಯಾಪಿಯ ರೈತರ ದಂಗೆ ಟ್ರ್ಯಾಕ್ಟರ್ ಮೂಲಕ ಜಂತರ್ ಮಂಥರ್ ಗೆ ನುಗ್ಗಿದ ಐತಿಹಾಸಿಕ ಹೋರಾಟಕ್ಕೆ ಕೇಂದ್ರ ಸರ್ಕಾರ ಮಣಿದು ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆದಿರುವಲ್ಲಿ ಇತಿಹಾಸ ಸೃಷ್ಟಿಯಾಯಿತು. ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಹೋರಾಟ ನಡೆಸಿದ ಝೆನ್ ಜಿ ತಂಡ ಸಚಿವ ಧರ್ಮೇಂದ್ರ ಪ್ರಧಾನ ರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಿದ ಹೋರಾಟದ ಕೇಂದ್ರಸ್ಥಾನ ಜಂತರ್ ಮಂಥರ್ ಪ್ರದೇಶವೇ ಯಾವುದೇ ಅಸ್ತ್ರ ಬಳಸಿ ಹೋರಾಟಗಳನ್ನು ಹತ್ತಿಕ್ಕಲು ಸರ್ಕಾರ ಪ್ರಯತ್ನಿಸಿದರು ಲೆಕ್ಕಿಸದ ಹೋರಾಟಗಾರರ ಪ್ರಬಲ ಶಕ್ತಿಯ ಬಳಕೆ ಯನ್ನು ವ್ಯಕ್ತಪಡಿಸಿತು. ಇದೀಗ ಇಂತಹ ಸ್ಥಳವನ್ನು ಪ್ರತಿಭಟನೆಗಳಿಂದ ದೂರವಿರಿಸುವ ಸರ್ಕಾರದ ನೀತಿ ಪ್ರಜಾಪ್ರಭುತ್ವ ವಿರೋಧಿ ನೀತಿ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸದಿರುವ ನೀತಿಯ ತತ್ವದ ಅನಾವರಣವಾಗಿದೆ. ಈ ಹೋರಾಟಕ್ಕಾಗಿ ಆದೇಶದೊಂದಿಗೆ ದೆಹಲಿಯ ರಾಮ್ ಲೀಲಾ ಮೈದಾನ, ಬುರಾರಿ, ಸಿಬಿಡಿ ಮೈದಾನಗಳಿಗೆ ಹೋರಾಟಗಳನ್ನು ಸ್ಥಳಾಂತರಿಸಲು ಪ್ರಯತ್ನಿಸಿದೆ ಈ ಸ್ಥಳಗಳು ದೆಹಲಿಯಿಂದ 20 ಕಿಲೋಮೀಟರ್ ಗಿಂತ ದೂರವಾಗಿದ್ದು ಈ ಪ್ರದೇಶಗಳ ನಿಗದಿಯು ಹೋರಾಟದ ಶಕ್ತಿಗಳನ್ನು ದುರ್ಬಲಗೊಳಿಸುವ ಸರ್ಕಾರದ ಹುನ್ನಾರವೇ ಆಗಿದೆ. ಇಷ್ಟು ದೂರದಲ್ಲಿ ನಡೆಸಿದ ಹೋರಾಟ ಯಾರ ಗಮನವನ್ನು ಸೆಳೆಯುವಲ್ಲಿ ವಿಫಲವಾಗುತ್ತದೆ. ಯಾವುದೇ ಸಮಸ್ಯೆಗಳು ಆಡಳಿತ ವರ್ಗದ ಕಿವಿಗೆ ಕೇಳಲಾರವು. ಅಧಿಕಾರ ಕೇಂದ್ರಕ್ಕೆ ಸಮೀಪ ವಾಗಿರುವ ನಗರದ ಹೃದಯ ಭಾಗದಲ್ಲಿ ಪ್ರತಿಭಟನೆಯ ಜಾಗ ಇರುವ ಅಂಶವು ಮುಖ್ಯ ಅರ್ಹತೆಯಾಗುತ್ತದೆ. ಸಾರ್ವಜನಿಕರಿಗೆ ಸೇರಿದ ಯಾವುದೇ ಸ್ಥಳದಲ್ಲಿ ನಾಗರಿಕ ಪ್ರತಿಭಟನೆ ನಡೆಸಲು ಅವಕಾಶ ನೀಡಿ, ಈ ವಿಷಯದಲ್ಲಿ ಸರ್ಕಾರದ ಹಠಮಾರಿತನ ಪ್ರತಿಭಟನೆಯ ಮೂಲಕ ನ್ಯಾಯ ಪಡೆಯಲು ಕಷ್ಟವೇ ಆಗಬಹುದು.





