
ಸಂತೆಬೆನ್ನೂರಿನ ಐತಿಹಾಸಿಕ ಪುಷ್ಕರಣಿಯಲ್ಲಿ 12ನೇ ವಿಶ್ವ ಯೋಗ ದಿನಾಚರಣೆ.
ವಿಶ್ವಕ್ಕೆ ಯೋಗವನ್ನು ತೋರಿಸಿಕೊಟ್ಟ ಕೀರ್ತಿ ಪ್ರಧಾನಿ ಮೋದಿಜಿ ಅವರಿಗೆ ಸಲ್ಲುತ್ತದೆ ಯೋಗದಲ್ಲಿ 12 ಹಾಸನಗಳಿವೆ. ಇವುಗಳು ನಮಗೆ ಮನಸ್ಸು ಮತ್ತು ಆರೋಗ್ಯವನ್ನು ಶುದ್ಧವಾಗಿ ಇಡುವಂತೆ ಮಾಡುತ್ತವೆ ಎಂದು ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಸದಾಶಿವಪ್ಪ ಹೇಳಿದರು.
ಚೆನ್ನಗಿರಿ ತಾಲೂಕು ಸಂತೆಬೆನ್ನೂರಿನ ಐತಿಹಾಸಿಕ ಪುಷ್ಕರಣಿಯಲ್ಲಿ ಭಾನುವಾರ ಕೆಪಿಎಸ್ ಶಾಲೆ ಹಾಗೂ ಶ್ರೀ ರಂಗನಾಥ ಪತಾಂಜಲಿ ಭಾರತ ಸ್ವಾಭಿಮಾನ ಟ್ರಸ್ಟ್ ಸಹಯೋಗದೊಂದಿಗೆ ಏರ್ಪಡಿಸಿದ್ದ 12ನೇ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿದಿನ ಯೋಗವನ್ನು ಮಾಡುವುದರಿಂದ ನಮ್ಮ ದೇಹ ಮತ್ತು ಮನಸ್ಸು ಉತ್ತಮ ಆರೋಗ್ಯವಾಗಿ ಇಡುತ್ತದೆ 196 ಯೋಗ ಸೂತ್ರಗಳು ಇವೆ. ಯಮ ನಿಯಮ ಹಾಸನ ಪ್ರಾಣಯಾಮ ಪ್ರತ್ಯಾಮ ದಾರಣ ತ್ಯಾಗ ಹಾಗೂ ಸಮಾಧಿ ಎಂಬ ಹಂತಗಳು ಇವೆ ನಮ್ಮ ರಾಜ್ಯ ಸರ್ಕಾರ ಯೋಗವನ್ನು ಪಠ್ಯದಲ್ಲಿ ಅಳವಡಿಸಿ ಮಕ್ಕಳಿಗೆ ಯೋಗ ತಿಳಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ತಿಳಿಸಿದರು.
ಈ ವೇಳೆ ಪತಂಜಲಿ ಯೋಗ ಪಟು ರಂಗನಾಥ್ ಹಾಗೂ ದೈಹಿಕ ಶಿಕ್ಷಕರಾದ ಉಸ್ನ ನವಾಜ್, ಅಂಜಲಿದೇವಿ, ತುಕಾರಾಂ ರವರು ಮಕ್ಕಳಿಗೆ ಯೋಗ ಹೇಳಿಕೊಟ್ಟರು. ಮುಖ್ಯ ಶಿಕ್ಷಕ ಹೆಚ್ ಎನ್ ರವಿ, ಪಾಪಯ್ಯ, ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಗುಡಾಳ್ ಉಜ್ಜನಪ್ಪ, ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಹನುಮಂತ ರಾಯಪ್ಪ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಕಿರಣ್ ಕುಮಾರ್, ಎಂ ಬಿ ನಾಗರಾಜ್, ದ್ಯಾಮೇಶ್, ಮಲ್ಲೇಶ್, ವೀರಭದ್ರಪ್ಪ, ಮಂಜುನಾಥ್ ಉಪಸ್ಥಿತರಿದ್ದರು.
ವರದಿ: ಅರುಣ್ ಕುಮಾರ್ ಕೊಳೆನೂರು




