ಶೃಂಗೇರಿ: ಕಿಗ್ಗಾದ ಮಘೇಬೈಲು ಗ್ರಾಮದಲ್ಲಿ ಪ್ರತ್ಯಕ್ಷವಾದ ಕಾಡಾನೆ ಗ್ರಾಮಸ್ಥರಲ್ಲಿ ಆತಂಕ ಸೃಷ್ಠಿಸಿದೆ. ನಾಗರಾಜ್ ನಾಯಕ್ ಎಂಬುವವರಿಗೆ ದಾರಿ ಮಧ್ಯೆ ಕಾಡಾನೆ ಕಾಣಿಸಿಕೊಂಡಿದ್ದು, ಕೂಡಲೇ ಸುತ್ತಮುತ್ತ ಕೆಲಸ ಮಾಡುತ್ತಿದ್ದವರಿಗೆ ಸೂಚನೆ ನೀಡಿ, ಸುರಕ್ಷತೆಗಾಗಿ ಸಮೀಪದ ಮನೆಯ ಬಳಿ ತೆರಳಿದ್ದಾರೆ. ಈ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
